ಬಳ್ಳಾರಿ ಮತ್ತು ವಿಜಯನಗರದಲ್ಲಿ ಕರೋನಾ ಹೆಚ್ಚಳ ಮುಂಜಾಗೃತೆಯೇ ಪರಿಹಾರ-ಆಂನದಸಿಂಗ್

ಹೊಸಪೇಟೆ ಮಾ 15 : ಬಳ್ಳಾರಿ ಹಾಗೂ ವಿಜಯನಗರದಲ್ಲಿ ಕರೋನಾ ಹೆಚ್ಚಳವಾಗುತ್ತಿದ್ದು ಮುಂಜಾಗೃತೆ ವಹಿಸುವುದೋಂದೆ ಪರಿಹಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.
ಹೊಸಪೇಟೆ ಪ್ರವಾಸಿ ತಾಣವಾಗಿರುವುದರಿಂದ ಹೊರರಾಜ್ಯ ಹಾಗೂ ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿರುತ್ತಾರೆ, ಹೀಗಾಗಿ ಪ್ರತಿಯೊಬ್ಬರು ಕರೋನಾ ಸಂಪೂರ್ಣ ಹೋಗುವವರೆಗೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಅನಿವಾರ್ಯ ಎಂದರು.
ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ:
ಕೋವಿಡ್ ಲಸಿಕೆ ಲಭ್ಯವಾಗಿದ್ದು ಪ್ರಪಂಚದಾದ್ಯಂತ ಮಾನ್ಯತೆ ದೊರೆಯುತ್ತಿದೆ. ಯಾವುದೆ ಅಂಚಿಕೆಗಳಿಲ್ಲದಂತೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸರ್ಕಾರ ಜನರ ಪ್ರಾಣ ರಕ್ಷಣೆಗೆ ಬದ್ದವಾಗಿದೆ. ಜನತೆಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತೀದೆ ಎಂದರು.