ಬಳ್ಳಾರಿ ಬೈ ಸ್ಕೈ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.19: ಇಂದಿನಿಂದ ಜ 23 ರ ವರೆಗೆ ಹೆಲಿಕಾಪ್ಟರ್ ನಲ್ಲಿ ಬಳ್ಳಾರಿ ನಗರ ಸೇರಿದಂತೆ,   ಮಿಂಚೇರಿ ಬೆಟ್ಟ, ತುಮಟಿ ಪ್ರದೇಶದ ವೀಕ್ಷಣೆಯ ಬಳ್ಳಾರಿ ಬೈ ಸ್ಕೈ ಆರಂಭಗೊಂಡಿದೆ. ಇದಕ್ಕೆ ಒಬ್ಬರಿಗೆ
3500 ರೂ ಟಿಕೆಟ್ ನಿಗಧಿಪಡಿಸಿದೆ. ನಗರದ ವಿಮಾನ ನಿಲ್ದಾಣ ದಿಂದ ಹೆಲಿಕಾಪ್ಟರ್ ಹಾರುತ್ತೆ. ಆರರಿಂದ 8 ನಿಮಿಷದಲ್ಲಿ ಒಂದು ಟ್ರಿಪ್ ಮಾಡಲಿದೆ. ಆರು ಜನರು ಒಮ್ಮೆ ಕುಳಿತು ಪ್ರಯಾಣಿಸಬಹುದಾಗಿದೆ. ಇಂದು ಇದಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ಮೇಯರ್ ರಾಜೇಶ್ವರಿ ಮೊದಲಾದವರು ಇದ್ದರು.