ಬಳ್ಳಾರಿ ಬೆಟ್ಟಕ್ಕೆ 434.82 ಲಕ್ಷ ರೂ ವೆಚ್ಚದಲ್ಲಿ
ವರ್ಣರಂಜಿತ ವಿದ್ಯುತ್ ದೀಪದ ಬೆಳಕು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,24- ನಗರದ ಬೆಟ್ಟದ ಮೇಲಿನ  ಐತಿಹಾಸಿಕ ಕೋಟೆಗೆ ಎಲ್ ಇಡಿ ಬಲ್ಪಗಳಿಂದ ವರ್ಣ ರಂಜಿತ ವಿದ್ಯುತ್‌ ಬೆಳಕಿನ ವ್ಯವಸ್ಥೆಯನ್ನು ಕೆ.ಕೆ.ಆರ್.ಡಿ.ಬಿಯ 434.82ಲಕ್ಷ ರೂ ವೆಚ್ಚದಲ್ಲಿ ಮಾಡಲಾಗುತ್ತಿದೆ.
ಈ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಯುಗಾದಿ ದಿನದಂದು ಚಾಲನೆ ನೀಡಿದರು. ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ, ಜೆ.ಶಾಂತ, ಪಾಲಿಕೆಯ  ಮೇಯರ್, ಸದಸ್ಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತಮಾಡಿದ ಸಚಿವ ಶ್ರೀರಾಮುಲು ಅವರು ಈ ಹಿಂದೆ ಒಮ್ಮೆ ಈ ಕೋಟೆಗೆ ಬೆಳಿಕಿನ ವ್ಯವಸ್ಥೆ ಮಾಡಿತ್ತು. ಅದು ಚೆನ್ನಾಗಿಯೂ ಇತ್ತು. ಆದರೆ ಕಳ್ಳರು ಕೇಬಲ್ ಕದ್ದು ಸ್ಥಗಿತಗೊಂಡಿತು. ಈ‌ಬಾರಿ ಹಾಗಾಗದಂತೆ ಮಾಡಿ. ಜನರಿಗೆ ಕೋಟೆಯನ್ನು ರಾತ್ರಿವೇಳೆಯಲ್ಲೂ, ಅದರಲ್ಲೂ ವರ್ಣ ರಂಜಿತವಾಗಿ ಕಾಣುವಂತೆ ಮಾಡುತ್ತಿದೆಂದು ತಿಳಿಸಿದರು.
ನಗರದಲ್ಲಿನ ಈ ಐತಿಹಾಸಿಕ
ಲೆಕ್ಸ್ ಲೈಟಿಂಗ್ ಕಂಪನಿ ಇದರ ಗುತ್ತಿಗೆ ಪಡೆದಿದ್ದು. 200 ಬಲ್ಪಗಳನ್ನು ಅಳವಡಿಸಿ, ಎರೆಡು ವರ್ಷ ಇದರ ನಿರ್ವಹಣೆ ಮಾಡಲಿದೆಂದು ಕಾಮಗಾರಿಯ ಗುತ್ತಿಗೆ ಪಡೆದಿರುವ ಶ್ರೀಧರ್ ಅವರು ಹೇಳಿದ್ದಾರೆ.
ಕೋಟೆಯ ಮಂಭಾಗಕ್ಕೆ ವರ್ಣರಂಜಿತ ವಿದ್ಯುತ್ ದೀಪ ಅಳವಡಿಸಲಿದ್ದು. ಆಯಾ ರಾಷ್ಟ್ರೀಯ ಹಬ್ಬ, ನಾಡ ಹಬ್ಬ, ಮತ್ತು ಸಂಪ್ರದಾಯಿಕ ಹಬ್ಬಗಳ ದಿನಕ್ಕೆ ತಕ್ಕಂತೆ ಬೆಳಕಿನ ವ್ಯವಸ್ಥೆ ಮಾಡಲಿದೆ.
ಕೋಟೆಯ ಇನ್ನಿತರ ಪ್ರದೇಶದಲ್ಲಿ ಸಾಮಾನ್ಯ ಬೆಳಿಕಿನ ವ್ಯವಸ್ಥೆ ಇರಲಿದೆ. ಕೋಟೆಯ ಪ್ರವೇಶ ದ್ವಾರದಲ್ಲೂ ಬೆಳಕಿನ ವ್ಯವಸ್ಥೆ ಮಾಡಲುದೆಂದು ಅವರು ತಿಳಿಸಿದರು. ಇದರ ವಿದ್ಯುತ್ ವೆಚ್ಚ ಭರಿಸುವುದು ಮತ್ತು ವ್ಯವಸ್ಥೆಗೆ ಬಳಕೆ ಮಾಡಿರುವ ಲೈಟ್ ಗಳು, ಕೇಬಲ್ ಕಳುವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಿಕೆಯದ್ದೆಂದರು.