ಬಳ್ಳಾರಿ ಬಿಸಿನೆಸ್ ಕಾಲೇಜಿಗೆ ಚಾಂಪಿಯನ್‌ಶಿಪ್ ಟ್ರೋಫಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.20: ಜೂ20: ಇಲ್ಲಿನ ಬಳ್ಳಾರಿ ಬಿಸಿನೆಸ್ ಕಾಲೇಜಿನ ವಿದ್ಯಾರ್ಥಿಗಳು ಜುಲೈ 15 ಮತ್ತು 16ರಂದು ದಾವಣಗೆರೆಯ ಬಾಪೂಜಿ ಬಿ ಸ್ಕೂಲ್ ನ  25ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ “ಆಕ್ಟೋಗನ್ 2022” ಮ್ಯಾನೇಜ್‌ಮೆಂಟ್ ಫೆಸ್ಟ್ ನಲ್ಲಿ ಭಾಗವಹಿಸಿ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಅಮರ್ ರಾಜ್ ಭೂಪಾಲ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಗವಹಿಸಿದ್ದ ಒಟ್ಟು 58 ಕಾಲೇಜುಗಳಲ್ಲಿ, ನಮ್ಮ ಕಾಲೇಜಿನ ಬಿಕಾಂ ಹಾಗೂ ಬಿಬಿಎ ವಿಭಾಗದ ಮೂರು ತಂಡಗಳು ಭಾಗವಹಿಸಿ, ಛಾಂಪಿಯನ್‌ಷಿಪ್ ಪಡೆದಿರುವುದು ನಮ್ಮ ಬಳ್ಳಾರಿಗೆ ಹೆಮ್ಮೆಯ ವಿಷಯವಾಗಿದೆ ಮತ್ತು ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಗಳಲ್ಲಿ ಭಾಗವಹಿಸಲು ಸಂರ್ಪೂಣವಾಗಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದ್ದಾರೆ.