ಬಳ್ಳಾರಿ ಬಂದ್ ನಲ್ಲಿ ಭಾಗವಹಿಸಲ್ಲ ಜಿಲ್ಲೆಯ ಇಬ್ಬಾಗದ ನೋವು ಸದಾ ಕಾಡುತ್ತದೆ : ಸೋಮಶೇಖರ್ ರೆಡ್ಡಿ

ಬಳ್ಳಾರಿ,ನ.21: ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಪ್ರತ್ಯೇಕವಾಗಿ ರಚಿಸುತ್ತಿರುವ ಸರಕಾರದ ನಿರ್ಧಾರ ನೋವು ನನ್ನನ್ನುಬ ಸದಾ ಕಾಡುತ್ತದೆ. ನ 26 ರಂದು ಅಖಂಡ ಜಿಲ್ಲಾ ಹೋರಾಟ ಸಮಿತಿ‌ಕರೆ ಕೊಟ್ಟಿರುವ ಬಳ್ಳಾರಿ ಬಂದ್ ನಲ್ಲಿ ನೇರವಾಗಿ‌ಪಾಲ್ಗೊಳ್ಳಲು ಸಾಧ್ಯವಿಲ್ಲ. ಆದರೆ ಅದಕ್ಕೆ ಯಶಸ್ಸು ಕೋರುವ ಎಂದು ನಗರ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಅವರು‌ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಜಯನಗರ ಜಿಲ್ಲೆ ವಿಭಜನೆ ಹೋರಾಟಕ್ಕೆ ಸಂಬಂಧಿಸಿದಂತೆ ತೀವ್ರ ಅಸಹಾಯಕ ಕಥೆ ವ್ಯಕ್ತಪಡಿಸಿದ ಅವರು. ಇತ್ತೀಚೆಗೆ ತಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಭಜನೆ ಮಾಡದಿರುವಂತೆ ಮನವಿ ಮಾಡಲಾಯಿತು. ಆದರೆ ಅವರು ವಿಭಜನೆ ಪರವಾದ ಮಾತುಗಳನ್ನು ಆಡಿದ್ದಾರೆ. ಜಿಲ್ಲೆಯು ಇಂದಲ್ಲ ನಾಳೆ ಯಾವುದೇ ಸರ್ಕಾರ ಬಂದರೂ ವಿಭಜನೆ ಯಾಗೋದು ನಿಲ್ಲುವಿದಿಲ್ಲ. ನಮ್ಮ ಅವಧಿಯಲ್ಲಿ ಮಾಡಿದರೆ ಅದು ನಮಗೇ ಸಹಕಾರಿ ಎಂದಿದ್ದಾರೆ. ಮುಖ್ಯಮಂತ್ರಿಗಳಾದಿಯಾಗಿ ಅನೇಕ ಹಿರಿಯ ಸಚಿವರು ಸಹ ಇದನ್ನು ಬೆಂಬಲಿಸಿ ನನಗೆ ಪ್ರತಿರೋಧ ಕೈಬಿಡಲು ತಿಳಿಸಿದ್ದಾರೆ ಎಂದರು.
ಬಳ್ಳಾರಿ ವಿಭಜನೆಯಾಗದೇ ಅಖಂಡವಾಗಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.ಜಿಲ್ಲೆಯ ಎಲ್ಲ ಶಾಸಕರು ಬಯಸಿದರೆ ಮತ್ತೊಮ್ಮೆ ಮುಖ್ಯಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗುತ್ತೇನೆ ಎಂದರು.
ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ವಿವಿಧ ಸಂಘಟನೆಗಳು ನವೆಂಬರ್ 26ರಂದು ಬಳ್ಳಾರಿ ಬಂದ್ ಕರೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು ಸರ್ಕಾರದ ಭಾಗವಾಗಿ ನೇರವಾಗಿ ಬೆಂಬಲಿಸಲಲಲು ಆಗುವುದಿಲ್ಲ. ಆದರೆ ನಾನು ಬಂದ್ ಯಶಸ್ವಿಯಾಗಲಿ ಎಂದು ಆಶಿಸುವೆಂದರು.
ವಿಧಾನಪರಿಷತ್ ಸದಸ್ಯ ಕೊಂಡಯ್ಯ ಬಿಟ್ಟರೇ ಬೇರೆ ಯಾರು ಇಬ್ಭಾಗಕ್ಕೆ ಬೆಂಬಲಿಸಿಲ್ಲ.‌ಸಚಿವ
ಶ್ರೀರಾಮುಲು ಸಹಮತ ವ್ಯಕ್ತಪಡಿಸಿರುವುದು ಅವರು ವೈಯಕ್ತಿಕ ವಿಚಾರ ಎಂದರು.
@12bc = ಸರಿಯಲ್ಲ:
ಜಾತಿಗೊಂದು ನಿಗಮ ಮಾಡುವುದು ಸರಿಯಲ್ಲ.ನಿಗಮದ ಬದಲಿಗೆ ಸರಕಾರವು ಎಲ್ಲ ಜಾತಿಗಳಲ್ಲಿನ ಬಡಜನರಿಗೆ ಸಹಾಯ ಮಾಡುವ ಕೆಲಸ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸ್ ಮೋತ್ಕರ್ ಮತ್ತಿತರರು ಇದ್ದರು.