ಬಳ್ಳಾರಿ ಪೊಲೀಸರಿಂದ 28 ಕಿಲೋ ಗಾಂಜಾ ವಶ 3 ಬಂಧನ

ಬಳ್ಳಾರಿ ಜೂ 03 : ಆಂದ್ರ ಪ್ರದೇಶದಿಂದ ರಾಜ್ಯದ ಶಿವಮೊಗ್ಗಕ್ಕೆ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿ ಅವರಿಂದ 28 ಕಿಲೋ ಗಾಂಜಾವನ್ನು ತಾಲೂಕಿನ ಪಿಡಿಹಳ್ಳಿ ಠಾಣೆ ಪೊಲೀಸರು ಇಂದು ಮಧ್ಯಾಹ್ನ ವಶಪಡಿಸಿಕೊಂಡಿದ್ದಾರೆ.

ಪೊಲೀಸರು ತಮಗೆ ಬಂದ ಮಾಹಿತಿ‌ ಮೇರೆಗೆ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ವೈ.ಕಗ್ಗಲ್ಲು ಕ್ರಾಸ್ ಬಳಿ ತಪಾಸಣೆ ಮಾಡಿದಾಗ ಇದು ದೊರೆತಿದೆ.

ಭದ್ರಾವತಿಯ ಅನ್ವರ್ ಕಾಲೋನಿಯ ಅಡಿಕೆ ವ್ಯಾಪಾರಿ ಆಶ್ಫಕ್ ಖಾನ್(24), ಹಣ್ಣಿನ ವ್ಯಾಪಾರಿ ತೌಷಿಬ್ ಖಾನ್ (21) ಮತ್ತು ಎರಡನೇ ವರ್ಷದ ಬಿ.ಕಾಂ ವಿದ್ಯಾರ್ಥಿ ಸಯ್ಯದ್ ಅಕ್ಸರ್ ಬಂಧಿತರು.

ಬಂಧಿತರಿಂದ ಅಕ್ರಮ ಗಾಂಜಾ ಸಾಗಾಣೆಗೆ ಬಳಸಿದ ಗಾಂಜಾ ಮತ್ತು 20 ಸಾವಿರ ನಗದನ್ನು ಸಹ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ