ಬಳ್ಳಾರಿ ಪಾಲಿಕೆ ಮೇಯರ್ ಜನರಲ್, ಉಪ‌ಮೇಯರ್ ಹಿಂದುಳಿದ ವರ್ಗ ಎ (ಮಹಿಳೆ) ಮೀಸಲು

ಬಳ್ಳಾರಿ ಏ 30 : ಇಲ್ಲಿನ‌ ಮಹಾನಗರ ಪಾಲಿಕೆಯ ಸದಸ್ಯರ ಚುನಾವಣೆ ಮುಗಿದಿದ್ದು ಕಾಂಗ್ರೆಸ್ ಸ್ಪಷ್ಟ ಬಹುಮತ ಒಡೆದಿದ್ದು.‌ ಈಗ ಮುಂದಿನ‌ ಸರದಿ ಮೇಯರ್ ಮತ್ತು‌ಉಪ‌ಮೇಯರ್ ಚುನಾವಣೆ.
ಮೇಯರ್ ಸ್ಥಾನ ಸಾಮಾನ್ಯ(ಜನರಲ್) ಹಾಗು‌ ಉಪ‌ಮೇಯರ್ ಸ್ಥಾನ ಹಿಂದುಳಿದ ವರ್ಗ ಎ (ಮಹಿಳೆಗೆ) ಮೀಸಲಿದ್ದು‌ ಮುಂದಿನ‌ ವಾರ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು ಬಂದು‌ ಚುನಾವಣೆ ನಡೆಸುವ ಸಾಧ್ಯತೆ ಇದೆ.
ಮೇಯರ್ ಸ್ಥಾನ‌ ಜನರಲ್ ಇರುವುದರಿಂದ ಬಹುತೇಕ ಪುರುಷರನ್ನೇ ಆಯ್ಕೆ ಮಾಡುವ ಸಾಧ್ಯತೆ ಇದ್ದು. ಅದಕ್ಕಾಗಿ‌ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯೂ ಇದೆ.
ಕಾಂಗ್ರೆಸ್ ಪಕ್ಷದಲ್ಲಿ ಐದು ಜನ ಕಮ್ಮ‌ ಸಮುದಾಯದಿಂದ ಅಸಯ್ಕೆಯಾಗಿರುವುದರಿಂದ ಮತ್ತು ನಗರ ಶಾಸಕ ಸೋಮಶೇಖರ ರೆಡ್ಡಿ ಅವರ ಪುತ್ರನನ್ನು ಸೋಲಿಸಿರುವ ಕಮ್ಮ‌ ಸಮುದಾಯದ ಮುಲ್ಲಂಗಿ ನಂದೀಶ್ ಮೇಯರ್ ಸ್ಥಾನ‌ಕೇಳುವ ಸಾಧ್ಯತೆಯೂ ಇದೆ. ಅಲ್ಲದೆ ಉದ್ಯಮಿಯಾಗಿರುವ ಅವರು ಇನ್ನಿತರ ಕಾರ್ಪೊರೇಟರ್ ಅವರ ಸಹ ಮತಪಡೆಯುವ ಕೆಲಸವೂ ಆಗಬಹುದು