ಬಳ್ಳಾರಿ ಪಾಲಿಕೆ ಮೇಯರ್ ಚುನಾವಣೆ ಜಿಂದಾಲ್ ನಲ್ಲಿ ನಾಳೆ ಸಭೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ: ನಾಡಿದ್ದು ನಡೆಯಲಿರುವ ಇಲ್ಲಿನ ಪಾಲಿಕೆ ಮೇಯರ್ ಮತ್ತು ಉಪ‌ಮೇಯರ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಹೊಟೇಲ್ ನಲ್ಲಿ ನಾಳೆ ಸಭೆ ಕರೆಯಲಾಗಿದೆ.

ವೀಕ್ಷಕರು ಸಹ ಅಲ್ಲಿಗೆ ಬರಲಿದ್ದು. ಸದಸ್ಯರೆಲ್ಲ‌ ಅಲ್ಲಿಗೆ ಬರಬೇಕು. ನಾಳೆ ಸಭೆ ನಡೆಸಲಿದೆ. ಸದಸ್ಯರು ನಾಳೆ ಜಿಂದಾಲ್ ನಲ್ಲಿಯೇ ಇದ್ದು‌ ನಾಡಿದ್ದು‌ ನೇರವಾಗಿ ಪಾಲಿಕೆಗೆ ಬರಬೇಕಿದೆ ಎಂದು ಪಕ್ಷದ ನಾಯಕರಿಂದ ಸದಸ್ಯರಿಗೆ ಸೂಚನೆ ಬಂದಿದೆಯಂತೆ.

ಈ ವರೆಗೆ ಮೇಯರ್ ಆಯ್ಕೆ ಸಂಬಂಧ ಸಭೆಗಳು ಬಳ್ಳಾರಿಯಲ್ಲಿನ ಹೊಟೇಲ್ ಗಳಲ್ಲಿಯೇ ನಡೆಯುತ್ತಿದ್ದವು. ಈಗ ಜಿಂದಾಲ್ ಗೆ ಶಿಫ್ಟ್ ಆಗಿದೆ. ಬಳ್ಳಾರಿಯಲ್ಲಿಯೇ ಸಭೆ ನಡೆದರೆ, ಭಿನ್ನಮತಕ್ಕೆ ಕಾರಣವಾದರೆ ಸದಸ್ಯರನ್ನು‌ ಹಿಡಿದಿಟ್ಟುಕೊಳ್ಳುವುದಕ್ಕಾಗಿ.‌
ಅಥವಾ ನಗರದಲ್ಲಾದರೆ ಬೆಂಬಲಿಗರ ಗಲಾಟೆ ಹೆಚ್ಚೆಮನದು ಸಭೆಯನ್ನು ಜಿಂದಾಲ್ ನಲ್ಲಿ ಕರೆಯಲಾಗಿದೆ ಎನ್ನಲಾಗುತ್ತಿದೆ.