ಬಳ್ಳಾರಿ ಪಾಲಿಕೆ ಚುನಾವಣೆ ಸೋಲಿಗೆ ಪಕ್ಷ‌ ಕಾರಣ: ಸಿಂಗ್

ಬಳ್ಳಾರಿ ಏ 30 : ಇಲ್ಲಿನ‌ ಮಹಾ ನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋತಿರೋ ವಿಚಾರ ಪಕ್ಷದ ಸೋಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಅವರು ಇಂದು‌ ಬಳ್ಳಾರಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡುತ್ತ. ಪಾಲಿಕೆಯಲ್ಲಿ ಜನರ ತೀರ್ಪನ್ನು ನಾವು ಒಪ್ಪುತ್ತೇವೆ. ಸೋಲಿನ ಹೊಣೆ ಎಲ್ಲರೂ ಹೋರುತ್ತೇವೆ. ಕೇವಲ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಸೋಲಿಗೆ ಕಾರಣ ಅಲ್ಲ. ಪಕ್ಷ ಎಲ್ಲಿ ತಪ್ಪು ಮಾಡಿದೆ ಎನ್ನುದನ್ನು‌ ಹುಡುಕುತ್ತೇವೆ. ಈ ಸಂಬಂಧ ನಾವು ಪಕ್ಷದಲ್ಲಿ ಚರ್ಚೆ ಮಾಡ್ತೆವೆ ಎಂದರು

ಸೋಲು ಗೆಲವು ಸಹಜ, ಚಾಮುಂಡಿಯಲ್ಲಿ ಮಾಜಿ‌ವಮುಖ್ಯ‌ಮಂತ್ರಿ ಸಿದ್ದರಾಮಯ್ಯ ಅವರನ್ನೇ ಜನ ಸೋಲಿಸಿದ್ದಾರೆ. ಅದೇ ರೀತಿ ಹೊಸ ಪ್ರದೇಶವಾದ್ರೂ ಬಾದಾಮಿಯಲ್ಲಿ ಗೆಲ್ಲಿಸಿದ್ದಾರೆ ಚುನಾವಣೆ ಅಮನದ ಮೇಲೆ ಸೋಲು ಗೆಲುವು ಇದ್ದೇ ಇರುತ್ತೆ ಎಂದರು.