ಬಳ್ಳಾರಿ ಪಾಲಿಕೆಯ 39 ವಾರ್ಡುಗಳಿಗೆ 244 ನಾಮಪತ್ರ

ಬಳ್ಳಾರಿ ಏ 15 : ಈ ತಿಂಗಳ 27 ರಂದು ನಡೆಯುವ ಇಲ್ಲಿನ‌ ಮಹಾ ನಗರ ಪಾಲಿಕೆಯ 39 ವಾರ್ಡುಗಳಿಗೆ 244 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮ‌ಪತ್ರ ಸಲ್ಲಿಸಲು ಇಂದು ಕೊನೆಯದಾಗಿತ್ತು. ನಾಮಪತ್ರ ಸಲ್ಲಿಸಿದವರಲ್ಲಿ ಕಾಂಗ್ರೆಸ್ ನಿಂದ -40, ಬಿಜೆಪಿಯಿಂದ -47, ಜೆಡಿಎಸ್-7, ಎನ್ ಸಿ ಪಿ-9, ಕೆ ಜಿ ಪಿ-2, ಸಮಾಜವಾದಿ ಪಕ್ಷ-4, ಶಿವಶೇನೆ-1, ಜನಹಿತ ಪಕ್ಷ-4, ಕರ್ನಾಟಕ ರಾಷ್ಟ್ರ ಸಮಿತಿ-3, ಆಮ್ ಆದ್ಮಿ ಪಕ್ಷ-7, ಎಎಎಪಿ- 2, ಕೆ ಆರ್ ಎಸ್ -1, ಎಐಎಂಎಎಂ-1, ಪಕ್ಷೇತರರು -116 ಒಟ್ಟಾರೆ 244 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕೆಲ ವಾರ್ಡುಗಳಲ್ಲಿ ಕಾಂಗ್ರೆಸ್ ಬಂಡಾಯದ ಅಭ್ಯರ್ಥಿಗಳು ಇದ್ದಾರೆ.
ನಾಳೆ ನಾಮ‌ಪತ್ರಗಳ ಪರಿಶೀಲನೆ ನಡೆಯಲಿದೆ.