ಬಳ್ಳಾರಿ ಪಾಲಿಕೆಯ ಮೇಯರ್ ಚುನಾವಣೆ ‌ಮುಂದೂಡಿಕೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ನ 16 : ನಾಡಿದ್ದು ನ 18 ರಂದು‌ ನಡೆಯಬೇಕಿದ್ದ ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪ‌ಮೇಯರ್ ಮತ್ತು ಸ್ಥಾಯಿ ಸಮಿತಿ‌ ಅಧ್ಯಕರ ಚುನಾವಣೆಯನ್ನು ಮುಂದೂಡಲಾಗಿದೆ.
ಚುನಾವಣೆ ನಡೆಸಬೇಕಿದ್ದ ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತರು ಇಂದು ಈ ಕುರಿತು ಆದೇಶ ಹೊರಡಿಸಿ. ಸಧ್ಯ ಜಿಲ್ಲಾಡಳಿತ ವಿಧಾನ‌ಪರಿಷತ್ ಚುನಾವಣೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವುದರಿಂದ ಮೇಯರ್ ಚುನಾವಣೆ ಮುಂದೂಡಿದೆ ಸಂಬಂಧಿಸಿದವರಿಗೆ ತಿಳಿಸುವಂತೆ ಬಳ್ಳಾರಿ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಎಲ್ಲಿಯವರಗೆ ಮುಂದೂಡಿಕೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ವಿಧಾನ ಪರಿಷತ್ ಚುನಾವಣೆ ಎಂದಿರುವುದರಿಂದ ಡಿ.16 ನಂತರವೇ ನಡೆಸಬೇಕಿದೆ.