ಬಳ್ಳಾರಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಆಸ್ತಿ, ನೀರಿನ ತೆರಿಗೆ ಕಡಿತ: ಶ್ರೀರಾಮುಲು

ಬಳ್ಳಾರಿ ಏ 22 : ನಡೆಯುತ್ತಿರುವ ಇಲ್ಲಿನ‌ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನತೆ ಬಯಸಿದಂತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಬಂದ ಮೇಲೆ ಜನತೆಗೆ ಹೆಚ್ಚಿಸಿರುವ ಆಸ್ತಿ ತೆರಿಗೆ ಕಡಿತ ಮಾಡಲಿದೆ.
ಕುಡಿಯುವ ನೀರಿನ‌ ತೆರಿಗೆಯನ್ನು‌ ಮಾಸಿಕ‌ 175 ರಿಂದ 100 ರೂಗೆ ಮಾಡಲಿದೆಂದು ಸಾಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರು‌ ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಪಾಲಿಕೆ ಚುನಾವಣೆಗೆ ಡಾ.ಅರುಣಾ ಕಾಮಿನೇನಿ, ಡಾ. ಬಿ.ಕೆ.ಸುಂದರ್, ಸಂಜಯ್ ಬೆಟಗೇರಿ ಮೊದಲಾದವರು ಸಿದ್ದಪಡಿಸಿರುವ ಪ್ರಣಾಳಿಕೆಯನ್ನು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಪಜ್ಷದ ಜಿಲ್ಲಾ ಅಧ್ಯಕ್ಷ ಚೆನ್ನಬಸನಗೌ ಅವರೊಂದಿಗೆ ಬಿಡುಗಡೆ ಮಾಡಿ‌ ಮಾತನಾಡುತ್ತಿದ್ದರು.

ಚುನಾವಣಾ ಒ್ರಚಾರ ಸಂದರ್ಭದಲ್ಲಿ ದಿನ‌ನಿತ್ಯ ವಾರ್ಡುಗಳಲ್ಲಿ‌35 ಕಿಲೋ ಮೀಟರ್ ನಷ್ಟು ಪಾದಯಾತ್ರೆ ಮಾಡಿ. ಜನರ ಸಮಸ್ಯೆಗಳನ್ನು ಅರಿತಿರುವೆ. ಎರೆಡು ಬಾರಿ ಬಿಜೆಪಿ ಪಾಲಿಕೆಯಲ್ಲಿ ಆಡಳಿತ ನಡೆಸಿತ್ತು. ಆಗ ಸಾಕಷ್ಟು ನಗರಕ್ಕೆ ಸಾಕಷ್ಟು‌ ಕೆಲಸ‌ ಮಾಡಿತ್ತು. ಆಗ ನಗರ ಶಾಸಕರಾಗಿರುವ ಸೋಮಶೇಖರ ರೆಡ್ಡಿ ಅವರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಪಾಲಿಕೆ ಉಪ ಮೇಯರ್ ಆಗಿ ಮಾಡಿದ ಕೆಲಸವನ್ನು ಜನರು ಈಗಲೂ ಸ್ಮರಿಸುತ್ತಿದ್ದಾರೆ.
ನಂತರ ಅವರು ಶಾಸಕರಾದರು.
ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ಅದು ಇಲ್ಲಿನ‌ ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಇರಬೇಕು ಎಂಬುದು ನಮ್ಮ ಆಶಯವಾಗಿದೆ. ಅದಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ನೀಡಿ ಎಂದು‌ ಕೇಳಿದೆ.
ಜನತೆ ಬಿಜೆಪಿ ಗೆ ಮತ‌ ನೀಡಲು ಮುಸ್ಲಿಂರು, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಸಮುದಾಯದ ಜನತೆ ಬಿಜೆಪಿಗೆ ಮತ ನೀಡಲು ಉತ್ಸಾಹಕರಾಗಿದ್ದಾರೆ ಹಾಗಾಗಿ‌ ನಗರಪಾಲಿಕೆಯ 39 ವಾರ್ಡುಗಳ ಪೈಕೆ 27 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆಂದರು.

ಬಿಜೆಪಿ ಆಡಳಿತಕ್ಕೆ ಬಂದರೆ. ಬೀದಿ‌ಬದಿ‌ ವ್ಯಾಪಾರಿಗಳಿಂದ ಈ ಹಿಂದಿನಂತೆ ತೆರಿಗೆ ವಸೂಲಿ‌ ಮಾಡಲ್ಲ, ಜನತೆ ತಮ್ಮ‌ಸಮಸ್ಯೆಗಳನ್ನು‌ ಹೇಳಿಕೊಂಡು ಪಾಲಿಕೆ ಕಚೇರಿಗೆ ಬರುವುದನ್ನು ತಪ್ಪಿಸಲು
ವಾರ್ಡವೈಸ್ ಜನ‌ಸಂಪರ್ಕ ಕಚೇರಿಗಳನ್ನು ತೆರೆಯಲಿದೆ. ಫಾರಂ 2 ಸಮಸ್ಯೆಯನ್ನು ಸರಳೀಕರಣಗೊಳಿಸಿ 21 ದಿನದಲ್ಲಿ ನೀಡುವುದು ಸೇರಿದಂತೆ ಅನೇಕ ಅಭಿವೃದ್ಧಿ ಯೋಜಬೆಗಳ‌ ಬಗ್ಗೆ ತಿಳಿಸಿದರು.

ಪಜ್ಷದ ಮುಖಂಡ ಅನಿಲ್ ನಾಯ್ಡು ಮೋಕಾ ಸ್ವಾಗತಿಸಿದರು. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ, ಮಾಜಿ ಸಂಸದೆ ಜೆ.ಶಾಂತ, ಬಿಜೆಪಿ ಪಕ್ಷದ ಮುಖಂಡರುಗಳಾದ ಎಸ್.ಗುರುಲಿಂಗನಗೌಡ,
ಕೌಲ್ ಬಜಾರ್ ಮಂಡಲ್ ಅಧ್ಯಕ್ಷ ಗೌಳಿ ಶಂಕ್ರಪ್ಪ ಅಲ್ಲಬಕಾಷ್, ವೀರಶೇಖರ ರೆಡ್ಡಿ, ‌ರಾಜೀವ್ ತೊಗರಿ, ಓಬಳೇಶ್, ಮೊದಲಾದವರು ಇದ್ದರು.

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ, ಮಾಜಿ ಸಂಸದೆ ಜೆ.ಶಾಂತ, ಬಿಜೆಪಿ ಪಕ್ಷದ ಮುಖಂಡರುಗಳಾದ ಎಸ್.ಗುರುಲಿಂಗನಗೌಡ,
ಕೌಲ್ ಬಜಾರ್ ಮಂಡಲ್ ಅಧ್ಯಕ್ಷ ಗೌಳಿ ಶಂಕ್ರಪ್ಪ ಅಲ್ಲಬಕಾಷ್, ವೀರಶೇಖರ ರೆಡ್ಡಿ, ‌ರಾಜೀವ್ ತೊಗರಿ, ಓಬಳೇಶ್, ಕೃಷ್ಣಾರೆಡ್ಡಿ ಮಪದಲಾದವರು ಇದ್ದರು.