ಬಳ್ಳಾರಿ: ನಿಲ್ಲದ ಕರೋನಾ ಸ್ಪೋಟ 5ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣಗಳು

ಬಳ್ಳಾರಿ ಏ 25 : ಲಾಕ್‍ಡೌನ್, ವೀಕೆಂಡ್ ಕಪ್ರ್ಯೂ, ಮಾಸ್ಕ ಧರಿಸಿದವರಿಗೆ ದಂಡ, ಸಮಾರಂಭಗಳಿಗೆ ಬ್ರೇಕ್, ಏನೆಲ್ಲ ಕ್ರಮ ತೆಗೆದುಕೊಳ್ಳುತ್ತಿದ್ದರೂ ಇನ್ನು ಗಣಿ ನಾಡು ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕರೋನ ಸ್ಪೋಟ ನಿಲ್ಲುತ್ತಿಲ್ಲ.
ನಿನ್ನೆ ದಿನ ಮೂರು ಜನ ಈ ಸೋಂಕಿಗೆ ಬಲಿಯಾಗಿದ್ದು. ಈ ವರಗೆ ಜಿಲ್ಲೆಯಲ್ಲಿ640 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ನಿನ್ನೆ 4164 ಜನರನ್ನು ಪರೀಕ್ಷೆ ಮಾಡಿದ್ದು 731 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದರಲ್ಲಿ ಬಳ್ಳಾರಿ ತಾಲೂಕಿನ 370, ಹೊಸಪೇಟೆಯ 74, ಸಂಡರಿನ 130, ಸಿರುಗುಪ್ಪ 44 ಜನರು ಸೇರಿದ್ದಾರೆ.
ಇದರಿಂದಾಗಿ ಜಿಲ್ಲೆಯಲ್ಲಿ 5047 ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಕ್ವಾರಂಟೈನ್ ನಲ್ಲಿ ಇದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 45903 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ದಿನೇ ದಿನೇ ಸೋಂಕು ವ್ಯಾಪಿಸುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.