ಬಳ್ಳಾರಿ ನಗರ ಸ್ಥಳೀಯ ಸಮಿತಿಯ ವತಿಯಿಂದ ಮಕ್ಕಳ ಶಿಬಿರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.18: ಎಸ್. ಯು. ಸಿ. ಐ (ಸಿ )ಬಳ್ಳಾರಿ ನಗರ ಸಮಿತಿ ವತಿಯಿಂದ ಹಲವು ಏರಿಯಾ ಗಳ ಮಕ್ಕಳ ನಡುವೆ  ನೀತಿ ನೈತಿಕತೆ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ತಿಳಿಸುತ್ತಾ ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ  ಬಂದಿದೆ . ಇದೇ ಹಿನ್ನೆಲೆಯಲ್ಲಿ ಬಳ್ಳಾರಿಯ ಎ.ಐ. ಡಿ.ಎಸ್.ಓ ಕಛೇರಿ ಎಲ್ಲಿ ಮಕ್ಕಳ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರಕ್ಕೆ ಶಿಕ್ಷಣ ಉಳಿಸಿ ಸಮಿತಿಯ (SEC) ನಾಗರತ್ನ  ರವರು ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣದ ದೊರಕಬೇಕಾಗಿದೆ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಹಲವಾರು ಮಹನೀಯರ ಹಾಗೂ ಮಾನವ ಸಮುದಾಯಕ್ಕೆ ಹಲವು ಕೊಡುಗೆಗಳನ್ನು ಕೊಟ್ಟ ವಿಜ್ಞಾನಿಗಳ  ಜೀವನ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಅವಶ್ಯಕತೆ ಇಂದಿನ ಪೀಳಿಗೆಗೆ ಇದೆ ಸಾವಿತ್ರಿ ಬಾಪುಲೆ,ಈಶ್ವರ್ ಚಂದ್ರ ವಿದ್ಯಾಸಾಗರ್, ಭಗತ್ ಸಿಂಗ್, ನೇತಾಜಿ, ಪ್ರೀತಿ,ಲತಾ ಒದ್ದೆದಾರ್. ಐನ್ಸ್ಟೀನ್, ಮೇಡಂ ಕ್ಯೂರಿ
 ಇಂತಹ ಹಲವು ಜನಗಳ ಬಗ್ಗೆ ಕಾಳಜಿ ಇರುವಂತಹ ವ್ಯಕ್ತಿಗಳ ಜೀವನ ಚರಿತ್ರೆ ಪುಸ್ತಕಗಳಲ್ಲಿ ಬರಬೇಕು ಎಂದು ಹೇಳುತ್ತಾ ಇಂತಹ ಶಿಬಿರಗಳು ಮತ್ತೆ ಮತ್ತೆ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಿ ದೊಡ್ಡ ಮಟ್ಟದಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು. ಜೊತೆಗೆ ಶಿಬಿರದಲ್ಲಿ  ಕಥೆ. ಆಟ . ಸಿನಿಮಾ ಪ್ರದರ್ಶನ  ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಎಸ್. ಯು. ಸಿ. ಐ (ಸಿ) ಪಕ್ಷದ ನಗರ ಸ್ಥಳೀಯ ಸಮಿತಿಯ ಕಾರ್ಯದಶಿಗಳಾದ ಡಾ.ಪ್ರಮೋದ್  ರವರು ಶಿಬಿರದ ಕುರಿತು ಮಕ್ಕಳಲ್ಲಿ ಪ್ರಶ್ನೆ ಮಾಡುವ ತರ್ಕ  ಮಾಡುವ ವೈಜ್ಞಾನಿಕ ಧರ್ಮ ನಿರಪೇಕ್ಷದ ಮನೋಭಾವನೆ ಮೂಡಬೇಕು ಮೌಢ್ಯತೆ ಅಳಿಯಬೇಕು  ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಈ ಕಾರ್ಯಕ್ರಮ ದಲ್ಲಿ ಎಸ್.ಯು. ಸಿ.ಐ (ಸಿ)ಸ್ಥಳೀಯ ಸಮಿತಿಯ ಸದಸ್ಯರಾದ ಗೋವಿಂದ್, ಈಶ್ವರಿ,ಸೌಮ್ಯ, ಶಾಂತಿ, ವಿದ್ಯಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.