ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ 2018
ಮತ್ತೆ ಶಾಸಕರಾದ ಸೋಮಶೇಖರ ರೆಡ್ಡಿ
 ಪ್ರಯತ್ನಿಸದೆ ಸೋತ ಲಾಡ್ 


ಎನ್. ವೀರಭದ್ರಗೌಡ
ಬಳ್ಳಾರಿ, ಮಾ.09: ಕಳೆದ 2013 ರ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಸೋಮಶೇಖರ ರೆಡ್ಡಿ ಅವರು  2018 ರಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಎರೆಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ಈ ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್  ತನಗೆ ಸೋಲು ಖಚಿತ ಎಂದು ಕೊಂಡೊ ಏನೋ ಚುನಾವಣೆಯನ್ನು ಸಮರ್ಥವಾಗಿ ಎದುರಿಸದೇ ಗೆಲಯವಿನ ಅವಕಾಶ ವಿದ್ದರೂ ಸೋಲುಕಂಡರು.
2013 ರಲ್ಲಿ ಆಯ್ಕೆಯಾಗಿದ್ದ ಅನಿಲ್ ಲಾಡ್ ಕ್ಷೇತ್ರದಲ್ಲಿ ಇದ್ದುದು ಕಡಿಮೆ, ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದನೆ ಇರಲಿಲ್ಲ. ಎಲ್ಕವೂ ಪಿಎಗಳ ಮುತುವರ್ಜಿಯಲ್ಲಿ ನಡೆಯಬೇಕಿತ್ತು.
ರಾಷ್ಟ್ರೀಯ ದಿನಾಚರಣೆ, ಗಣೇಶನ ಹಬ್ಬ ಮೊದಕಾದ ಕಾರ್ಯಕ್ರಮಗಳನ್ನು ಬಿಟ್ಟರೆ ಅವರು ಕ್ಷೇತ್ರದ ಕಡೆ ಕಾಣಿಸಿಕೊಳ್ಳಲಿಲ್ಲ.
ಜೊತೆಗೆ ತನ್ಮ‌ಕಿರಿಯ ಸಹೋದರ ಸಂತೋಷ್ ಲಾಡ್ ಜಿಲ್ಕಾ ಉಸ್ತುವಾರಿ ಸಚಿವರಾಗಿ ಇಲ್ಲಿಗೆ ಬಂದಿದ್ದರ ಅಸಮಾಧಾನದಿಂದಲೂ ಕ್ಷೇತ್ರದ ಜನರಿಂದ ಅಂತರ ಕಾಯ್ದುಕೊಂಡರು.
ಈ ವೇಳೆಗೆ ಜಾಗೃತ ರಾದ ಸೋಮಶೇಖರ ರೆಡ್ಡಿ ಅವರು ಕ್ಷೇತ್ರದ ಜನರೊಂದಿಗೆ ಬೆರೆತು ಓಡಾಡತೊಡಗಿದರು.
ಸಿಟ್ಟಿಂಗ್ ಎಂಎಲ್ ಎ ಗೆ ಟಿಕೆಟ್ ಎಂಬ ಕಾರಣಕ್ಕೆ ಕಾಂಗ್ರೆಸ್ ನಲ್ಲಿ ಬೆರೆಯವರೂ  ಪ್ರಯತ್ನಿಸದ ಕಾರಣ ಲಾಡ್ ಗೆ ಅನಾಯಾಸವಾಗಿ ಟಿಕೆಟ್ ಸಿಕ್ತು. ಸ್ಥಳೀಯವಾಗಿ ಪಾಲಿಕೆ ಕಾಂಗ್ರೆಸ್ ಆಡಳಿತದಲ್ಲಿದ್ದರೂ. ಲಾಡ್ ಪಾಲಿಕೆ ಸದಸ್ಯರನ್ನು ಪರಿಗಣಿಸಲಿಲ್ಲ. ತಮ್ಮಿಂದ ಜನರಿಗೆ ಕಿರಿಕ್ ಇಲ್ಲ. ನನ್ನ ಬಿಟ್ಟರೆ ಮತ್ಯಾರಿಗೆ ಓಟು ಹಾಕ್ತಾರೆಂಬ ನಿರ್ಲಕ್ಷ ಮನೋಭಾವದಿಂದ ಚುನಾವಣೆಯನ್ನು ಸಮರ್ಥವಾಗಿ ಎದುರಿಸದೇ ಸೋಮಶೇಖರ ರೆಡ್ಡಿ ವಿರುದ್ದ 16155 ಮತಗಳ‌ ಅಂತರದಿಂದ ಸೋಲು ಕಂಡರು. ಸೋಮಶೇಖರ ರೆಡ್ಡಿ ಎರಡನೇ ಬಾರಿಗೆ ಶಾಸಕರಾಗಿ ನಗೆ ಬೀರಿದರು.
ಲಾಡ್  ಗೆಲುವಿನ ಪ್ರಯತ್ನ ಚುನಾವಣೆಯಲ್ಲಿ ಕಂಡು ಬರದಿದ್ದರೂ, ತಮ್ಮದೇ ಸಮುದಾಯದ ಮುಖಂಡ ಜೆಡಿಎಸ್ ನಿಂದ ಕಣಕ್ಕಿಳಿದಿದ್ದರೂ, ಅವರು ಸಹ ಸಾಕಷ್ಟು ಪ್ರಚಾರ, ಹಣ ಖರ್ಚು‌ಮಾಡಿದರೂ.  ಮುಸ್ಲೀಂ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೇ ಮತ ಚಲಾಯಿಸಿದರು.  ಇದರಿಂದಾಗಿ ಲಾಡ್ 60 ಸಾವಿರ ಮತ ಪಡೆಯಿವಂತಾಯ್ತು.
ಈ ಚುನಾವಣೆಯಲ್ಲಿ
 ಒಟ್ಟು 2,33284 ಮತದಾರರಲ್ಲಿ
151267 ಚಲಾವಣೆಗೊಂಡ ಮತಗಳಲ್ಲಿ.  ಬಿಜೆಪಿಯ ಸೋಮಶೇಖರ ರೆಡ್ಡಿ, 76589 ಮತ ಪಡೆದರೆ, ಪ್ರತಿ ಸ್ಪರ್ಧಿ  ಕಾಂಗ್ರೆಸ್ ಪಕ್ಷದ ಅನಿಲ್ ಲಾಡ್- 60434  ಮತ ಪಡೆದರು.
ಜೆಡಿಎಸ್ ನ ಮಹಮ್ಮದ್ ಇಕ್ಬಾಲ್ ಅವರು 6255, ನೋಟಾಗೆ 1016, ಕೆಪಿಜೆಪಿಯ ಮೇಕಲ ಈಶ್ವರರೆಡ್ಡಿ 913, ಜೆಡಿಯುನ ಟಪಾಲ್ ಗಣೇಶ್ 233 ಮತ ಪಡೆದರು. ಪಜ್ಷೇತರರು ಸೇರಿದಂತೆ ಒಟ್ಟಾರೆ 29 ಜನ ಸ್ಪರ್ಧಾ ಕಣದಲ್ಲಿದ್ದರು.