ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಜಿ.ಹಮೀದ್ ಭಾಷ

ಬಳ್ಳಾರಿ, ನ.7: ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಎಸ್. ಮಹಮ್ಮದ್ ರಫೀಕ್ ರವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾದ ಜಿ. ಹಮೀದ್ ಭಾಷ ರವರನ್ನು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಶರ್ಮಸ್ ಸಾಬ್, ಮೋಕ ರೂಪನಗುಡಿ ಬ್ಲಾಕ್ ಅಧ್ಯಕ್ಷರಾದ ಅಸುಂಡಿ ನಾಗರಾಜ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಅಯಾಜ್ ಅಹಮ್ಮದ್, ಕಾಂತಿನೋಹ ವಿಲ್ಸನ್, ಕಾರ್ಯದರ್ಶಿಗಳಾದ ಜೈ ಕುಮಾರ್ ನಾಯುಡು, ಅಲಿವೇಲು ಸುರೇಶ್, ಗೋನಾಳ್ ನಾಗಭೂಷಣ ಗೌಡ, ಶ್ರೀಮತಿ ಶಮೀಮ್ ಜಕ್ಲಿ, ಮೇಟಿ ದಿವಾಕರ್ ಗೌಡ, ಕೆ. ತಾಯಪ್ಪ, ಮೊದಲಾದವರು ಉಪಸ್ಥಿತರಿದ್ದರು.