ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್‍ನ ಕಾರ್ಯದರ್ಶಿಯಾಗಿ ಕೆ.ತಾಯಪ್ಪ ನೇಮಕ

ಬಳ್ಳಾರಿ, ನ.1- ನಗರದ ಕೆ.ತಾಯಪ್ಪ ಅವರನ್ನು ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ಪಕ್ಷದ ಜಿಲ್ಲಾ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ನೇಮಕ ಮಾಡಿ ಇಂದು ಆದೇಶ ಪ್ರತಿ ನೀಡಿದ್ದಾರೆ.
ಅವರು ತಕ್ಷಣ ಕಾರ್ಯ ಪ್ರವೃತ್ತರಾಗಿ ಪಕ್ಷದ ಜಿಲ್ಲಾ ಸಮಿತಿ ಮಾರ್ಗದರ್ಶನದಲ್ಲಿ ಸ್ಥಳೀಯ ನಾಯಕರ ಸಹಯೋಗದೊಂದಿಗೆ ಪಕ್ಷದ ಸಂಘಟನೆ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿಷ್ಟೆಯಿಂದ ಪಾಲಿಸುತ್ತ ಪಕ್ಷದ ಬಲವರ್ಧನೆಗೆ ಎಲ್ಲರ ಸಹಕಾರ ಪಡೆದು ಮುಂದಾಗುವುದಾಗಿ ತಾಯಪ್ಪ ಅವರು ಹೇಳಿದ್ದಾರೆ. ಅಲ್ಲದೆ ತಮ್ಮ ಈ ನೇಮಕ ಕ್ಕೆ ಸಹಕರಿಸಿದ ಎಲ್ಲಾ ಮುಖಂಡರಿಗೆ, ಹಿತೈಷಿಗಳ ಸಹಕಾರವನ್ನು ತಾಯಪ್ಪ ಸ್ಮರಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಅಸುಂಡಿ ನಾಗರಾಜ ಗೌಡ, ಅಯಾಜ್, ಜೆ.ಕೆ.ನಾಯ್ಡು. ಎಂ.ಶ್ರೀಧರ್, ಯಲಮಂಚಲಿ ಶ್ರೀನಿವಾಸ್, ಮೊದಲಾದವರು ಇದ್ದರು