ಬಳ್ಳಾರಿ ನಗರ, ಗ್ರಾಮೀಣ ಸಿರುಗುಪ್ಪ
ಕೆ.ಆರ್.ಎಸ್.ಅಭ್ಯರ್ಥಿಗಳ ಘೋಷಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ಪ್ರಸಕ್ತ ಚುನಾವಣೆಯಲ್ಲಿ ಕೆ.ಆರ್.ಎಸ್ ಪಕ್ಷದಿಂದ ಜಿಲ್ಲೆಯ  ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ ಮತ್ತು ಸಿರಗುಪ್ಪ ಕ್ಷೇತ್ರದ ಅಭ್ಯರ್ಥಿಗಳನ್ನು ಇಂದು ಘೋಷಣೆ ಮಾಡಿದೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಪಕ್ಷದ ಮುಖಂಡ ಅಲ್ಲಿಪುರದ ಕಾಪು ಶ್ರೀನಿವಾಸ ರೆಡ್ಡಿ  ತಾವು ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಕಾವಲಿ ಈರಣ್ಣ, ಸಿರುಗುಪ್ಪ ಕ್ಷೇತ್ರದಿಂದ ದೊಡ್ಡ ಯಲ್ಲಪ್ಪ ಅವರು ಸ್ಪರ್ಧೆ ಮಾಡಲಿದ್ದಾರೆಂದು ತಿಳಿಸಿದರು.
ತಮ್ಮ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದರೆ. ಭ್ರಷ್ಟಾಚಾರ ಮುಕ್ತ ದಕ್ಷ ಆಡಳಿತ ನೀಡಲಿದೆ. 3 ಲಜ್ಷ ಖಾಲಿ ಹುದ್ದೆಗಳನ್ನು ಭರ್ತಿ‌ಮಾಡಲಿದೆ.ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲಿದೆ. ಪೊಲೀಸ್ ಇಲಾಖೆಯಲ್ಲಿ ಬದಲಾವಣೆ, ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯಲಿದೆ. ಪೋಡಿ ಮುಕ್ತ ಗ್ರಾಮಗಳ ರಚನೆ, ಪ್ರತಿ ಜಿಲ್ಲೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ ಸ್ಥಾಪನೆ, ಸರ್ವರಿಗೂ ಉಚಿತ ಗುಣ ಮಟ್ಟದ ಶಿಕ್ಷಣ ನೀಡಲಿದೆ ಸೇರಿದಂತೆ ಅನೇಕ ಅಂಶಗಳ ಬಗ್ಗೆ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರು,  ಕಾರ್ಯಕರ್ತರು ಇದ್ದರು.