ಬಳ್ಳಾರಿ ನಗರ ಕ್ಷೇತ್ರ ಮೂವರಲ್ಲೂ ಗೆಲುವಿನ ವಿಶ್ವಾಸ


ಎನ್.ವೀರಭದ್ರಗೌಡ
ಬಳ್ಳಾರಿ ಮೇ 12 : ನಗರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಕೆಆರ್ ಪಿ ಪಕ್ಷದ ಮೂರು ಜನ ಅಭ್ಯರ್ಥಿಗಳು ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಬಿಜೆಪಿ ಅಭ್ಯರ್ಥಿ ಶಾಸಕ ಸೋಮಶೇಖರ ರೆಡ್ಡಿ ಅವರಿಗೆ ಕೆಆರ್ ಪಿ ಪಕ್ಷದಿಂದ ಆದ ಒಳ ಪೆಟ್ಟು ಒಂದಿಷ್ಟು ನೋವನ್ನುಂಟು‌ಮಾಡಿದ್ದರೂ ಬಿಜೆಪಿಯ ಮತ ಬ್ಯಾಂಕ್ ,ಅಭಿವೃದ್ಧಿ ವಿಷಯ, 
ನಾವು ಎಲ್ಲಾ ಮತದಾರರನ್ನು  ಸಮಾನವಾಗಿ ಕಂಡಿದ್ದೇವೆ ಸೇರಿದಂತೆ ಹಲವು ಅಂಶಗಳ ಮೂಲಕ ಗೆಲುವಿನ ವಿಶ್ವಾಸದಲ್ಲಿ ನಿನ್ನೆ ಫಲಿತಾಂಶದ ಬಗ್ಗೆ  ಆತಂಕವಿಲ್ಲದೆ ಸಿನಿಮಾ ನೋಡಿ, ಇಂದು ಹಲವು ವಿವಾಹ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಹರ್ಷ ಚಿತ್ತದಿಂದಲೇ ಓಡಾಡುತ್ತಿದ್ದಾರೆ. ಇಬ್ಬರ ಹಣದ ಅಬ್ಬರದ ನಡುವೆ ಬಿಜೆಪಿ ಬರುತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೆಆರ್ ಪಿ  ಅಭ್ಯರ್ಥಿ ಲಕ್ಷ್ಮೀ ಅರುಣ ಅವರಿಗೆ ಚುನಾವಣೆ ಮಾಡಿದ ಅನುಭವವಿಲ್ಲ. ಚುನಾವಣೆ ಮಾಡಿದ ತಂದೆ ಪರಮೇಶ್ವರ ರೆಡ್ಡಿ, ಪತಿ ಜನಾರ್ಧನ ರೆಡ್ಡಿ ಮತ್ತವರ ಬೆಂಬಲಿಗರ ಮಾರ್ಗದರ್ಶನದಂತೆ ಪ್ರತಿ‌ನಿತ್ಯ ಸಂಚರಿಸಿ, ಬಿಸಿಲಲ್ಲಿ ಮತಯಾಚಿಸಿ ಧಣಿವರಿದಿದ್ದ ಅವರು ಫಲಿತಾಂಶದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ. ಮೊಮ್ಮಕ್ಕಳೊಂದಿಗೆ ಆಟವಾಡುತ್ತ  ಸಂಬಂಧಿಕರೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಚುನಾವಣೆ ಮಾಡಿದವರು ನಾವು ಬಿಜೆಪಿಗಿಂತ ಎರಡರಷ್ಟು ಮತದಾರರನ್ನು ನೋಡಿಕೊಂಡಿದ್ದೇವೆ. ಎಲ್ಲೂ ಕೊರತೆ ಮಾಡಿಲ್ಲ, ಕಾಂಗ್ರೆಸ್ ನ ಮಾಜಿ ಸಚಿವರ ಬೆಂಬಲ, ಹಲವು‌ ಕಾರ್ಪೊರೇಟರ್ , ಜೊತೆಗೆ ಕಾಂಗ್ರೆಸ್ ನಲ್ಲಿ ಇದ್ದಂತೆ ಇದ್ದು ತಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದು.  ಅಲ್ಲದೆ ಮುಸ್ಲಂ ಧರ್ಮ ಗುರುಗಳಿಂದ ಮುಸ್ಲಿಂ ಮತಗಳನ್ನು ಕಾಂಗ್ರೆಸ್ ನಿಂದ ತಮ್ಮ‌ಪಕ್ಷಕ್ಕೆ ಸೆಳೆಯುವಲ್ಲಿ ಯಶ್ವಿಯಾಗಿರುವುದು
ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ. ಅದಕ್ಕಾಗಿ ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂಬ ವಿಶ್ವಾಸಹೊಂದಿದ್ದಾರೆ.
ಇನ್ನು ಕಾಂಗ್ರೆಸ್ ಮತದಾರರನ್ನು ತಲುಪುವಲ್ಲಿ ಒಂದಿಷ್ಟು ಹೆಚ್ಚು ಕಡಿಮೆ, ಕಾಂಗ್ರೆಸ್ ಪಕ್ಷದ ಮುಖಂಡರ ಒಳ ಪೆಟ್ಟಿನ ನಡುವೆಯೂ,  ಭರತ್ ರೆಡ್ಡಿ ಅವರ ಈ ಮೊದಲಿನ ಸಾಮಾಜಿಕ ಸೇವೆ, ಕುಕ್ಕರ್ ಹಂಚಿದ್ದು, ಪಕ್ಷದ ಸಾಂಪ್ರದಾಯಿಕ ಮತ ಬ್ಯಾಂಕ್ ನಿಂದ ಗೆಲುವಿನ‌ ವಿಶ್ವಾಸದಲ್ಲಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ತಂದೆ ಮಗ ಮಾತ್ರ ಜೊತೆಯಲ್ಲಿ ಪ್ರಚಾರದಲ್ಲಿ ಕಾಣಿಸಿಕೊಳ್ಳದೇ ಹೋಗಿದ್ದು ಮಾತ್ರ ಈ ವರಗೆ ನಗರದ ಮತದಾರರಿಗೆ ಯಾಕೆ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.
ಒಟ್ಟಾರೆ ಮೂರು ಪಕ್ಷ ಮತ್ತು ಅಭ್ಯರ್ಥಿಗಳಲ್ಲಿ ಗೆಲುವಿನ ವಿಶ್ವಾಸವಿದೆ ನಾಳೆ ಮತಗಳ ಎಣಿಕೆ ಆಗಲಿದೆ.  ಜಿಲ್ಲೆಯಲ್ಲಿ ಈ ಕ್ಷೇತ್ರದ ಫಲಿತಾಂಶ ಉಳಿದ ಕ್ಷೇತ್ರಗಳಿಗಿಂತ ಬರುವುದು ಮಾತ್ರ ಒಂದಿಷ್ಟು ವಿಳಂಬವಾಗಲಿದೆ  ಯಾರು ಗೆದ್ದರೂ ಗೆಲುವಿನ ಅಂತರ ಮಾತ್ರ ಕಡಿಮೆ ಆಗಬಹುದು.