ಬಳ್ಳಾರಿ ನಗರ ಕ್ಷೇತ್ರ ಟಿಕೆಟ್ಆಂಜನೇಯಲುಗೆ ನೀಡಲು ಎಐಸಿಸಿಗೆ ತೀವ್ರ ಒತ್ತಡ


(ಸಂಜೆವಾಣಿ ವಾರ್ತೆ)
ಬೆಂಗಳೂರು, ಏ.05: ಯುವ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ‌ ಹಾಲಿ  ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಜೆ.ಎಸ್.ಆಂಜನೇಯಲು ಅವರಿಗೆ ಈ ಬಾರಿಯ ಬಳ್ಳಾರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಟಿಕೆಟ್ ನೀಡಬೇಕೆಂದು ಎಐಸಿಸಿ ಮೇಲೆ ತೀವ್ರ ಒತ್ತಡ ಹೆಚ್ಚಿದೆಯಂತೆ.
ಅಭ್ಯರ್ಥಿಗಳ ಆಯ್ಕೆಯ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ನಾರಾ ಭರತ್ ರೆಡ್ಡಿ ಮತ್ತು ಆಂಜನೇಯಲು ಅವರ ಹೆಸರು ಅಂತಿಮಗೊಳಿಸಿ ಎಐಸಿಸಿಗೆ ಶಿಫಾರಸ್ಸು ಮಾಡಿತ್ತು.
ನಾರಾಭರತ್ ರೆಡ್ಡಿ ಪರವಾಗಿ  ಸರ್ವೇಗಳು ಉತ್ತಮ ವರದಿ ನೀಡಿವೆ ಎಂದು ರಾಜ್ಯ ಉಸ್ತುವಾರಿ ಸುರ್ಜಿವಾಲ, ಸಿದ್ದರಾಮಯ್ಯ ಅವರು ಟಿಕೆಟ್ ನೀಡಲು ಸಭೆಯಲ್ಲಿ ಸೂಚಿಸಿದರೆ‌.
ಮತ್ತೊಂದು ಕಡೆ ಪಕ್ಷಕ್ಕೆ ಅವರ ತಂದೆಯವರು ಸೇವೆ ಇದೆ. ಈ ಯುವಕನಿಂದ ಪಕ್ಷಕ್ಕೆ  ಇನ್ನೂ ಹೆಚ್ಚಿನ  ಸೇವೆಯಾಗಿಲ್ಲ. ಕಳೆದ ಐದಾರು ವರ್ಷದಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದಾರಷ್ಟೇ.
ಈ ಬಾರಿ ನಮ್ಮ‌ಪಕ್ಷದ ಅಭ್ಯರ್ಥಿ ಗೆಲ್ಲಲು ಎಲ್ಲಾ ರೀತಿ ಅನುಕೂಲದ ಸಂದರ್ಭ ಇದೆ. ಅದಕ್ಕಾಗಿ ರೆಡ್ಡಿಗಳ ವಿರುದ್ದ ಸೆಟೆದು ನಿಂತು.  ಕಳೆದ ಎರೆಡು ದಶಕಗಳಿಂದ ಪಕ್ಷದಲ್ಲಿ ದುಡಿದಿರುವ ಆಂಜನೇಯಲು ಅವರಿಗೆ ಟಿಕೆಟ್ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಪರಮೇಶ್ವರ, ವಿಧಾನ ಪರಿಷತ್ತಿನಲ್ಲಿ ಪ್ರತಿ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡುರಾವ್, ಸಂದೀಪ್   ಅವರು ಎಐಸಿಸಿ ಸಭೆಯಲ್ಲಿ ಒತ್ತಡ ತಂದಿದ್ದಾರಂತೆ.
ಅಲ್ಲದೆ ಮಣಿಪಾಲ ರಾಜ್ಯದ ಶಾಸಕಿ ತಿಲ್ಕಸನ ದೇವಿ, ತಮಿಳುನಾಡಿನ ಸಂಸದ ಸೆಲ್ವ ಕುಮಾರ್, ಶಾಸಕಿ ವಿಜಯದೇವಿ. ಕೇರಳದ ರಾಜ್ಯ ಸಭಾ ಸದಸ್ಯ ಡೀಶ್ಯಾಮ್, ಲೋಕಸಭೆ ಸದಸ್ಯೆ ರಮ್ಯಾ, ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ರೇವಂತರೆಡ್ಡಿ, ಮಾಜಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ, ಮಹಾರಾಷ್ಟ್ರದ ಮಾಜಿ ಮುಖ್ಯ ಮಂತ್ರಿ ವಿಲಾಶ್ ರಾವ್ ದೇಶಮುಖ ಅವರ ಪುತ್ರ ಅನಿಲ್ ದೇಶ್ ಮುಖ್ ಮೊದಲಾದವರು ಆಂಜನೇಯಲು ಅವರಿಗೆ ಟಿಕೆಟ್ ನೀಡುವಂತೆ ಶಿಫಾರಸ್ಸು ಮಾಡಿರುವುದಲ್ಲದೆ ಎಐಸಿಸಿಯ ಉನ್ನತ ನಾಯಕರ ಮೇಲೆ ಒತ್ತಡ ತಂದಿದ್ದಾರೆಂದು ತಿಳಿದು ಬಂದಿದೆ.
ರೆಡ್ಡಿ ಸಮುದಾಯಕ್ಕೆ ಕಲ್ಯಾಣ ಕರ್ನಾಟ ಕರ್ನಾಟಕದಲ್ಲಿ ರಾಯರೆಡ್ಡಿ, ಹಂಪನಗೌಡ ಬಾದರ್ಲಿ, ಅಮರೆಗೌಡ ಬಯ್ಯಾಪುರ, ಶರಣಬಸಪ್ಪ ದರ್ಸನಾಪುರ ಅವರಿಗೆ ಟಿಕೆಟ್ ನೀಡಿದೆ. ಈ ಮೊದಲಿನಿಂದ ಬಳ್ಳಾರಿಯಲ್ಲಿ ಕಮ್ಮ ಸಮುದಾಯ ಹೆಚ್ಚು  ಸಂಖ್ಯೆಯಲ್ಲಿದ್ದಾರೆ. ಮೊದಲಿನಿಂದ ಕಮ್ಮ ಸಮುದಾಯ ಇಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈಗ
ಇತರೇ ಬಿಜೆಪಿ ಮತ್ತು ಕೆ ಆರ್ ಪಿ  ಪಕ್ಷಗಳಿಂದಲೂ  ರೆಡ್ಡಿ ಸಮುದಾಯದ ಅಭ್ಯರ್ಥಿಗಳು ಇರುವುದರಿಂದ ಕಾಂಗ್ರೆಸ್ ಪಕ್ಷ ಕಮ್ಮ ಸಮುದಾಯದ ಆಂಜನೇಯಲು ಅವರಿಗೆ ಟಿಕೆಟ್ ನೀಡುವುದು ಸುಕ್ತ  ವಾದವನ್ನು  ಮಂಡಿಸಿದೆಯಂತೆ.
ಹೀಗಾಗಿ ಸಧ್ಯ ಬಳ್ಳಾರಿ ಟಿಕೆಟ್ ಫೈನಲ್ ಮಾಡುವುದನ್ನು ಮುಂದಕ್ಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.