ಬಳ್ಳಾರಿ ನಗರ ಕ್ಷೇತ್ರದ
 ಕಾಂಗ್ರೆಸ್ ಅರ್ಜಿಗಳಿಗೆ ಹೆಚ್ಚಿದ ಬೇಡಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಮುಂಬರುವ 2023 ರ  ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಳ್ಳಾರಿ ನಗರ ಕ್ಷೆತ್ರದಿಂದ ರಾಜ್ಯದಲ್ಲಿಯೇ ಅತಿ‌ ಹೆಚ್ಚು ಆಕಾಂಕ್ಷಿಗಳು ಅರ್ಜಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಲ್ಲ ಮೂಲಗಳ ಪ್ರಕಾರ ನಿನ್ನೆ ವರೆಗೆ ಕೆಪಿಸಿಸಿ ಕಚೇರಿಯಲ್ಲಿ ಐದು ಸಾವಿರ ರೂಗಳನ್ನು ನೀಡಿ ಟಿಕೆಟ್ ಆಕಾಂಕ್ಷಿಗಳು ಪಡೆದಿರುವ ಅರ್ಜಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 14 ಜನ ಬಳ್ಳಾರಿ ನಗರ ಕ್ಷೇತ್ರದಿಂದ ಅರ್ಜಿ ಪಡೆದಿದ್ದಾರಂತೆ. ಅದರಲ್ಲೂ ಕಮ್ಮ ಸಮುದಾಯದ ಅಭ್ಯರ್ಥಿಗಳು  ಹೆಚ್ಚಿದ್ದಾರೆಂಬ ಮಾಹಿತಿ ಇದೆ.
ಇನ್ನು ಅರ್ಜಿ ಪಡೆದವರಲ್ಲಿ ಪಾಲಿಕೆ ಸದಸ್ಯರು, ಮಾಜಿ ಸಚಿವರ, ಶಾಸಕರ ಪುತ್ರರು ಸೇರಿದ್ದಾರಂತೆ. ಅರ್ಜಿಯನ್ನು ಭರ್ತಿ ಮಾಡಿ ಎಸ್ಸಿ ಎಸ್ಟಿ ಅಭ್ಯರ್ಥಿಗಳು ಒಂದು ಲಕ್ಷ ರೂ, ಇತರರು ಎರೆಡು ಲಕ್ಷ ರೂ ನೀಡಿ ಸಲ್ಲಿಸಬೇಕಿದೆ.