ಬಳ್ಳಾರಿ ನಗರ ಕಾಂಗ್ರೆಸ್ ಟಿಕೆಟ್ ಭರತ್ ಗೆ ಬಹುತೇಕ ಖಚಿತ


ಎನ್.ವೀರಭದ್ರಗೌಡ
ಬಳ್ಳಾರಿ, ಏ.01: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಅವರ ಪುತ್ರ ಜಿ.ಪಂ. ಮಾಜಿ ಸದಸ್ಯ ನಾರಾ ಭರತ್ ರೆಡ್ಡಿ ಅವರಿಗೆ ಬಹುತೇಕ ಖಚಿತವಾಗಿದೆಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಬಳ್ಳಾರಿ ನಗರದ ಸ್ಪರ್ಧಿಯಾಗಲು ಬಯಸಿ 17ಕ್ಕೂ ಹೆಚ್ಚು ಜನ ಟಿಕೇಟ್ ಬಯಸಿ ಕೆಪಿಸಿಸಿ ಅರ್ಜಿ ಸಲ್ಲಿಸಿದ್ದರು.ಸ್ಕ್ರೀನಿಂಗ್ ಕಮಿಟಿಯಲ್ಲಿ 17 ಜನರ ಪೈಕಿ ಆಂಜನೇಯಲು,. ಅಲ್ಲಂ ಪ್ರಶಾಂತ್, ಅನಿಲ್ ಲಾಡ್, ಭರತ್ ರೆಡ್ಡಿ, ದಿವಾಕರಬಾಬು ಅವರ ಹೆಸರುಗಳು ಚರ್ಚೆಗೆ ಬಂದಿದ್ದವು. ಅಂತಿಮವಾಗಿ ಬಳ್ಳಾರಿಯಲ್ಲಿ ರೆಡ್ಡಿಗಳನ್ನು ಎದುರಿಸಲು ಹಣ ಮತ್ತು ಎದೆಗಾರಿಕೆ ಬೇಕು ಎಂಬ ನಿಟ್ಟಿನಲ್ಲಿ ಜೊತೆಗೆ ಪಕ್ಷದ ಉನ್ನತ ನಾಯಕರು ಸಹ ಈಗಾಗಲೇ ಭರತ್ ರೆಡ್ಡಿ ಚುನಾವಣೆಯಲ್ಲಿ ಮಾಡಬೇಕಾದ ರಾಜಕೀಯ ತಂತ್ರಗಳನ್ನು ಮಾಡಲು ಸಮರ್ಥರಾಗಿದ್ದಾರೆಂಬುದನ್ನು ಮನಗಂಡು ಭರತ್ ಅವರನ್ನು ಅಂತಿಮಗೊಳಿಸಲು ಪಕ್ಷದ ರಾಜ್ಯ ಉಸ್ತುವಾರಿ ಸುರ್ಜಿವಾಲ ಮತ್ತು ಕೆಪಿಸಿಸಿ ಅಧ್ಯಕ್ಷರು ಒಲವು ಹೊಂದಿದ್ದಾರೆಂದು ಹೇಳಲಾಗುತ್ತಿದೆ.
ನಿನ್ನೆವರೆಗೂ ಸಮುದಾಯ ಪಕ್ಷನಿಷ್ಠೆ ಹಿನ್ನಲೆಯಲ್ಲಿ ಅಲ್ಲಂ ಪ್ರಶಾಂತ್ ಅವರಿಗೆ ಟೆಕೆಟ್ ದೊರೆಯಲಿದೆ ಎಂಬ ಸನ್ನಿವೇಶ ಇತ್ತು.
ಈಗ ಪಕ್ಷದಲ್ಲಿ ಅಲ್ಲಂ ಪ್ರಶಾಂತ್ ಅವರನ್ನು ಡಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಮುಂದೆ ಅವರಿಗೆ ಇನ್ನಿತರ ಅವಕಾಶ ಕಲ್ಪಿಸಲು ಪಕ್ಷದ ಮುಖಂಡರು ನಿರ್ಣಯಿಸಿ ಭರತ್ ಅವರಿಗೆ ಟಿಕೆಟ್ ಕೊಡಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ.
ಆದರೆ ಸದ್ಯಕ್ಕೆ ಚುನಾವಣೆವರೆಗೆ ಹಾಲಿ ಅಧ್ಯಕ್ಷ ಜಿ.ಎಸ್.ಮೊಹಮ್ಮದ್ ರಫೀಕ್ ಅವರನ್ನು ಮುಂದುವರಿಸಲು ಚುನಾವಣೆ ನಂತರ ಪ್ರಶಾಂತ ಅವರನ್ನು ನೇಮಿಸಲಿದೆ ಎಂಬ ಮಾತು ಕೇಳಿಬಂದಿದೆ.
ಈ ಮಧ್ಯೆ ಮುಸ್ಲಿಂ ರು ಕೇವಲ ಮತ ಬ್ಯಾಂಕ್ ಮಾಡಿಕೊಳ್ಳದೆ ಒಬ್ಬರಿಗೆ ಟಿಕೆಟ್ ನೀಡಿ, ಹರಪನಹಳ್ಳಿ, ಹೊಸಪೇಟೆ ಇಲ್ಲ ಎಂದರೆ ಬಳ್ಳಾರಿ ಟಿಕೆಟ್ ನೀಡಿ ಎಂದು ರಫೀಕ್ ಸಹ ಕೇಳಿದ್ದಾರಂತೆ ಇದನ್ನು ಸಹ ಸದ್ಯ ಪಕ್ಷ ಪರಿಗಣಿಸದೆ ಭರತ್ ಅವರೇ ಸೂಕ್ತ ಎಂದು ನಿರ್ಧರಿಸಿ ದೆಹಲಿಗೆ ತೆರಳಿದ ಪಟ್ಟಿಯಲ್ಲಿ ಅಂತಿಮಗೊಳಿಸಿದ್ದಾರಂತೆ ದೆಹಲಿಯಿಂದ ಪಟ್ಟಿ ಪ್ರಕಟವಾಗುವುದಷ್ಟೇ ಬಾಕಿ ಇದೆ.
ಭರತ್ ಈ ಮೊದಲಿನಿಂದಲೇ ತಮಗೆ ಟಿಕೆಟ್ ದೊರೆಯಲಿದೆ ಎಂಬ ವಿಶ್ವಾಸ ಹೊಂದಿದ್ದರು. ಪಕ್ಷಕ್ಕೆ ಸಾಮಾಜಿಕ ಸೇವೆ ಮೂಲಕ ಜನರೊಂದಿಗೆ ಹೊಂದಿರುವ ಸಂಪರ್ಕ ಹಾಗೂ ಚುನಾವಣೆಯನ್ನು ಎದುರಿಸಲು ಬೇಕಾದ ಆರ್ಧಿಕ ಸಂಪನ್ಮೂಲದ ಬಗ್ಗೆ ಸಹ ಪಕ್ಷಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇತ್ತ ನಗರವನ್ನು ಒಂದು ಸುತ್ತು ತಮ್ಮ ಜನ್ಮದಿನದ ಅಂಗವಾಗಿ ಜನರಿಗೆ ಕುಕ್ಕರ್ ಹಂಚುವ ಮೂಲಕ ಮನೆ ಮನೆಗೆ ಭರತ್ ಪರಿಯಚವಾದುದ್ದರ ಬಗ್ಗೆ ಸಹ ಪಕ್ಷ ವೀಕ್ಷಿಸಿದೆಯಂತೆ. ಒಟ್ಟಾರೆ ಅಳೆದು ತೂಗಿ ಗೆಲ್ಲುವ ಕುದುರೆ ಎಂದು ಭರತ್ ಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧಾರಕ್ಕೆ ಬಂದಿದೆಯಂತೆ.
ಭರತ್ ಗೆ ಟೆಕೆಟ್ ನೀಡಿದರೆ, ಅವರ ತಂದೆ ನಾರಾಯಣರೆಡ್ಡಿ ಪ್ರಭಾವ ಇರುವ ಬಳ್ಳಾರಿ ಗ್ರಾಮೀಣ, ಕಂಪ್ಲಿ ಕ್ಷೇತ್ರಕ್ಕೂ ಒಂದಿಷ್ಟು ಸಹಕಾರಿಯಾಗಲಿದೆಂಬುದನ್ನು ಪಕ್ಷ ಪರಿಗಣಿಸಿದೆಯಂತೆ.
ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವೆ. ಸಿಗುತ್ತದೆಂಬ ನಂಬಿಕೆಯಿದೆ, ಎಲ್ಲವುದು ಪಕ್ಷಕ್ಕೆ ಬಿಟ್ಟ ವಿಚಾರ ಟಿಕೆಟ್ ದೊರೆತರೆ ನನ್ನ ಗೆಲುವು ಖಚಿತ:
ಭರತ್ ರೆಡ್ಡಿ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಳ್ಳಾರಿ ನಗರ