ಬಳ್ಳಾರಿ ನಗರಾಭಿವೃದ್ಧಿ ಕುರಿತು ಚರ್ಚೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.01: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾ ಭವನದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಕುರಿತು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಇವರೊಂದಿಗೆ ಸಂವಾದ ಸಭೆಯನ್ನು ಆಯೋಜಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಸಿ.ಶ್ರೀನಿವಾಸ್ ರಾವ್ ಅವರು ಸಂಸ್ಥೆಯ ನಡೆದು ಬಂದ ದಾರಿ ಮತ್ತು ಸಾಧನೆಯ ಬಗ್ಗೆ ಗಣ್ಯರಿಗೆ ಪರಿಚಯಿಸಿದರು.
ನಂತರ ಸಭೆಯಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಬಹು ದಿನದಿಂದ ನೆನೆಗುದಿಗೆ ಬಿದ್ದಿರುವ ನಗರಕ್ಕೆ ಸಂರ್ಪಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಅತ್ಯಾಧುನಿಕ ಒಣಮೆಣಿಸಿನಕಾಯಿ ಮಾರುಕಟ್ಟೆ, ಕೈಗಾರಿಕಾ ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಕೈಗಾರಿಕಾ ಪ್ರದೇಶದಲ್ಲಿ ಪ್ರತ್ಯೇಕ ಅಗ್ನಿ ಶಾಮಕ ಠಾಣೆಯನ್ನು ಸ್ಥಾಪಿಸುವುದು,ವಿಮಾನ ನಿಲ್ದಾಣದ ಕಾಮಗಾರಿ, ಸುಧಾಕ್ರಾಸ್ ಬಳಿಯಿರುವ ರೈಲ್ವೆ ಮೇಲು ಸೇತುವೆಯ ಬಗ್ಗೆ, ಹೀಗೆ ಹತ್ತು ಹಲವು ಬೇಡಿಕೆಗಳನ್ನು ವಿಧಾನ ಪರಿಷತ್ ಸದಸ್ಯರ ಮುಂದೆ ಗಮನ ಸೆಳೆದರು.
ಇದಕ್ಕೆ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯರಾದ ವೈ.ಎಂ.ಸತೀಶ್ ಉತ್ತರಿಸುತ್ತಾ, ಈಗಾಗಲೇ ತಾವು ಮಂಡಿಸಿರುವ ಬಹುತೇಕ ಬೇಡಿಕೆಗಳು ಸರಕಾರದಲ್ಲಿ ಪ್ರಗತಿಯ ಹಾದಿಯಲ್ಲಿದ್ದು ತಮ್ಮೆಲ್ಲರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಬದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸರಾವ್, ಗೌರವ ಕಾರ್ಯದರ್ಶಿಗಳಾದ ಯಶ್‍ವಂತ್ ರಾಜ್ ನಾಗಿರೆಡ್ಡಿ ಮಾನ್ಯರಿಗೆ ಮನವಿಯನ್ನು ಸಲ್ಲಿಸಿದರು. ಹಾಗೂ ಹಿರಿಯ ಉಪಾಧ್ಯಕ್ಷರಾದ ಮಹಾರುದ್ರಗೌಡ, ಮತ್ತು ಮಂಜುನಾಥ, ಕೆ.ರಮೇಶ್ ಬುಜ್ಜಿ, ಕೆ.ಸಿ.ಸುರೇಶ್ ಬಾಬು, ಹಾಗೂ ಜಂಟಿ ಕಾರ್ಯದರ್ಶಿಗಳಾದ ದೊಡ್ಡನಗೌಡ, ಸೊಂತಗಿರಿಧರ್,ವಿವಿಧ ಕಮಿಟಿಯ ಚೇರ್ಮನಗಳು, ವಿಶೇಷ ಆಹ್ವಾನಿತರು ಹಾಗೂ ವಿಶೇಷ ಸಮನ್ವಯ ಸಮಿತಿ ಸದಸ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು.