ಬಳ್ಳಾರಿ ನಗರ:ಭರತ್ ಗೆ ಗೆಲುವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.13: ನಗರ ವಿಧಾನಸಭಾ ಕ್ಷೇತ್ರದಲ್ಲಿ 33ರ ಯುವಕ ನಾರಾಭರತ್ ರೆಡ್ಡಿಗೆ ಜಯ ದೊರೆತಿದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡುತ್ತಿದ್ದು ತಂದೆ ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ, ಚಿಕ್ಕಪ್ಪ ನಾರಾಪ್ರತಾಪ್ ರೆಡ್ಡಿ ಅವರ ಪ್ರಯತ್ನ ಪಕ್ಷದ ವರ್ಚಸ್ಸು ಸಾಮಾಜಿಕ ಸೇವೆ ಜೊತೆಗೆ ಲಕ್ಷ್ಮೀಯ ಆಶೀರ್ವಾದಿಂದ ಕುಕ್ಕರ್ ಭರ್ಜರಿಯಾಗಿ ಸಿಟಿ ಹೊಡೆದಿದೆ ಎನ್ನಬಹುದು.
ತಾಲೂಕಿನ ಕೊಱ್ಲಗುಂದಿ ಕ್ಷೇತ್ರದ ಜಿ.ಪಂ. ಸದಸ್ಯರಾದ ನಂತರ ಶಾಸಕರಾಗಬೇಕು ಎಂಬ ಹೆಬ್ಬಾಕೆಯಿಂದ ತಮ್ಮ ಟಚ್ ಫರ್ ಲೈಫ್ ಪೌಂಢೇಶನ್ ಮೂಲಕ ಜನರ ಸೇವೆ ಮಾಡಿ ಸನಿಹರಾದರು. ಬಳಿಕ ಮನೆ ಮನೆಗೂ ಭರತ್ ಎಂಬ ಅಭಿಯಾನದ ಮೂಲಕ ಕುಕ್ಕರ್ ಹಂಚಿ ಪ್ರತಿ ಮನೆಯಲ್ಲಿ ಸಿಟಿ ಹೊಡೆಸಿದರು.
ಕಾಂಗ್ರೆಸ್ ಪಕ್ಷದ ಟಿಕೆಟ್ ತರಲು ಬಹಳ ತ್ರಾಸ್ ಅನುಭವಿಸಿದರೂ, ನಂತರ ಕೆಲವರು ಪಕ್ಷದಲ್ಲಿದ್ದುಕೊಂಡೆ ವಿರೋಧ ಮಾಡಿದರೂ ಜನರ ಒಲವು ಕಾಂಗ್ರೆಸ್  ಸ್ನೇಹಿತರ, ಪಕ್ಷದ ಕಾರ್ಯಕರ್ತರ, ಹಲವು ಮುಖಂಡರ ಸಹಕಾರದಿಂದ 25 ಸಾವಿರ ಮತಗಳಿಗಿಂತಲೂ ಹೆಚ್ಚು ಅಂತರದಿಂದ ಆಯ್ಕೆಯಾಗಿದ್ದಾರೆ ಭರತ್.
ಇಂಗ್ಲೇಡ್ ನಲ್ಲಿ ಎಂ.ಬಿ.ಎ ಅಭ್ಯಾಸ ಮಾಡಿರುವ ಭರತ್ ಭ್ರಷ್ಠಾಚಾರ ಮುಕ್ತ ಬಳ್ಳಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಅದು ಸಫಲವಾಗಬೇಕಿದೆ. ಇಬ್ಬರು ಪ್ರಬಲ ಅಭ್ಯರ್ಥಿಗಳ ಮಧ್ಯೆ ಭರತ್ ಗೆಲುವು ನಗರದಲ್ಲಿ ಮತದಾರ ಬಯಸಿದಂತಾಗಿದೆ.