ಬಳ್ಳಾರಿ ನಗರಕ್ಕೆ 19 ಕೋಟಿ ರೂ ಗಳ ಮತ್ತೊಂದು ಯೋಜನೆ: ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,14- ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 19 ಕೋಟಿ ರೂಗಳ ಮತ್ತೊಂದು ಯೋಜನೆಯನ್ನು ಮಂಜೂರು ಮಾಡಿದ್ದಾರೆಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ಇಂದು ಸಂಜೆವಾಣಿಯೊಂದಿಗೆ ಮಾತನಾಡಿ, ಮೋಕಾ ಬಳಿಯ ಎಲ್,ಎಲ್, ಸಿ ಕಾಲುವೆಯಿಂದ ಇಗಾಗಲೇ ಕುಡಿಯುವ ನೀರಿನ ರೈಸಿಂಗ್ ಮೇನ್ ಪೈಪ್ ಅಳವಡಿಸಿಕೊಂಡು ಬಂದಿದೆ. ಇದರಿಂದ ನಗರದ 19 ಒಚರ್ ಹೆಡ್ ಟ್ಯಾಂಕ್ಗಳನ್ನು ಭರ್ತಿ‌ಮಾಡುತ್ತಿದೆ. ಎರೆಡು ದಿನಕ್ಕೆ ಒಮ್ಮೆ ನೀರು ನೀಡಲು ಅನುಕೂಲವಾಗುವಂತೆ ಮತ್ತೊಂದು ರೈಸಿಂಗ್ ಮೇನ್ ಪೈಪ್ ಲೈನ್ ಅಳವಡಿಸಲು ಮುಖ್ಯ ಮಂತ್ರಿಗಳ ಬಳಿ ಮನವಿ ಮಾಡಿದ್ದೆ. ಅದಕ್ಕೆ ಅವರು ನಿನ್ನೆ ಮೌಖಿಕವಾಗಿ ಅನುಮೋದನೆ ನೀಡಿದ್ದಾರೆ. ಈ ಯೋಜ‌ನೆಯಿಂದ ವಿಸ್ತಾರವಾಗಿ ಬೆಳೆಯುತ್ತಿರುವ ನಗರಕ್ಕೆ ನೀರು ನೀಡಲು ಹೆಚ್ಚಿನ ಸಹಕಾರ ಆಗಲಿದೆಂದು ಹೇಳಿದ್ದಾರೆ.