ಬಳ್ಳಾರಿ ನಗರಕ್ಕೆ ಸರ್ವರೊಡನೆ ಬೆರೆಯುವ ಅಭ್ಯರ್ಥಿಗಾಗಿ  ಕಾಂಗ್ರೆಸ್ ಹುಡುಕಾಟ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.11: ಇಲ್ಲಿನ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಕಾರಣ ಹಣವಿದ್ದವರು ಪಕ್ಷದ ಸೇವೆ ಮಾಡಿದವರ ಗುಂಪೆಂದು. ಸಿದ್ದರಾಮಯ್ಯ ಬಣ ಮತ್ತು ಡಿಕೆಶಿ ಬಣ ಎಂದು ಕಿರಿಯರು ಮತ್ತು ಹಿರಿಯರು ಮುಂತಾದ ಕಾರಣ ಎರೆಡು ಭಾಗಗಳಾಗಿ ಟಿಕೆಟ್ ನೀಡುವುದು ಎಐಸಿಸಿ ವರಿಷ್ಠರಿಗೆ ತಲೆ ನೋವಾಗಿದ್ದು. ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಅಭ್ಯರ್ಥಿ ಬೇಕಿದೆ ಎನ್ನುವಂತಿದೆ.
ಸರ್ವೇ ಮತ್ತು ಮನೆ ಮನೆಗೂ ಭರತ್ ಕಾರ್ಯಕ್ರಮದ ಮೂಲಕ ಜನ‌ಮನ್ನಣೆ ಪಡೆದಿದ್ದಾರೆ. ನಾರಾ ಭರತ್ ರೆಡ್ಡಿ ಎಂದು ಎಐಸಿಸಿಯ ನಾಯಕ ಸುರ್ಜಿವಾಲ ಮತ್ತು ಸಿದ್ದರಾಮಯ್ಯ ಗುಂಪು ಹೇಳುತ್ತಿದೆಯಂತೆ.
ಜೆ.ಎಸ್.ಅಂಜನೇಯಲು ಅವರು ನಾವು ಹಲವು ದಶಕಗಳಿಂದ ಪಕ್ಷದ ಸೇವೆ ಮಾಡಿದೆ ಟಿಕೆಟ್ ಹಣವಿದ್ದವರ ಪಾಲಾಗುವುದು ಬೇಡ ಎಂದು ಪಟ್ಟು ಹಿಡಿದಿದ್ದು. ಇದಕ್ಕೆ ಮೂಲ ಕಾಂಗ್ರೆಸ್ಸಿಗರು ಬೆಂಲಸಿದ್ದು ಡಿಕೆಶಿ ಅವರ ಬೆಂಬಲವೂ ಇದೆಯಂತೆ.
ಇದರಿಂದಾಗಿ ಕಗ್ಗಂಟಾಗಿದೆಯಂತೆ. ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಮತ್ತು ಡಿಕೆಶಿ ಅವರು ನಿನ್ನೆ ಕೆಲ ಮುಖಂಡರನ್ನು ಕಳಿಸಿ  ಪಕ್ಷದಲ್ಲಿ ಹಿರಿಯರಾದ ಅಲ್ಲಂ ವೀರಭದ್ರಪ್ಪ ಅವರನ್ನು ಮನವೊಲಿಸುವಂತೆ ಸೂಚಿಸಿದ್ದರಂತೆ.
ಆದರೆ ಹಣವಿರುವ ರೆಡ್ಡಿಗಳೆಲ್ಲ ಕಣ್ಣಕ್ಕಿಳಿಯುತ್ತಿದ್ದಾರೆ. ಹಣವಿಲ್ಲದೆ ಚುನಾವಣೆ ಎದುರಿಸುವುದು ಅಸಾಧ್ಯ ನಮ್ಮ ಬಳಿ ಅಷ್ಟು ಹಣ ಇಲ್ಲ. ಪಕ್ಷ ಆಲೋಚಿಸಿ ತೀರ್ಮಾನಿಸಲಿ ಎಂದಿದ್ದಾರಂತೆ.
ಈ ಮಧ್ಯೆ ಮಾಜಿ ಸಚಿವ ದಿವಾಕರ ಬಾಬು ಅವರ ಬಗ್ಗೆ ಸಹ ವಿಚಾರಿಸುವ ಕೆಲಸ ನಡೆದಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಒಬ್ಬರಿಗೆ ಕೊಟ್ಟರೆ ಮತ್ತೊಂದು ಗುಂಪು ಭಿನ್ನಮತ ತಳೆಯುವ ಕೆಲಸ ಆಗಬಾರದು. ಎಲ್ಲರನ್ನು ಒಂದುಗೂಡಿಸಿಕೊಂಡು ಹೋಗುವ ವ್ಯಕ್ತಿ ಬೇಕು ಎಂಬ ಹುಡುಕಾಟ ನಡೆದಿದೆ. ಒಟ್ಟಾರೆ ಎರಡನೇ ಪಟ್ಟಿಯಲ್ಲಿ ಪ್ರಕಟಿಸುವ ಸಾಧ್ಯತೆ ಕಡಿಮೆ ಇದ್ದು ಅಂತಿಮ ಪಟ್ಟಿವರೆಗೆ ಹೋಗ ಬಹುದು ಎನ್ನಲಾಗುತ್ತಿದೆ.

One attachment • Scanned by Gmail