ಬಳ್ಳಾರಿ ನಗರಕ್ಕಿಂದು ಪಂಚರತ್ನ ಯಾತ್ರೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.10: ಜೆಡಿಎಸ್ ನ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆ ಇಂದು ನಗರದಲ್ಲಿ ನಡೆಯುತ್ತಿದೆ.
ಇದರಂಗವಾಗಿ ನಗರದ ಹೊರ ವಲಯದ ಹೊನ್ನಳ್ಳಿ ರಸ್ತೆಯ ಗುಗ್ಗರ ಹಟ್ಟಿಯ ಕೃಷ್ಣ ಕಾಲೋನಿಯ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ  ಜೆಡಿಎಸ್ ನ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
ಇದರಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯ ಅಧ್ಯಕ್ಷ ಸಿಎಂ.ಇಬ್ರಾಹಿಂ, ಶಾಸಕ ವೆಂಕಟರಾವ್ ನಾಡಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ, ಜಿಲ್ಲಾ ಅಧ್ಯಕ್ಷ ಪಿ.ಎಸ್.ಸೋಮಲಿಂಗಮಗೌಡ, ನಗರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಮುನ್ನಾಬಾಯ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಇದಕ್ಕಾಗಿ ಬೃಹತ್ ವೇದಿಕೆ, ಡಿಜಟಲ್ ಪರದೆ, ಕಾರ್ಯಕರ್ತರು, ಅಭಿಮಾನಿಗಳಿಗೆ ಕುರ್ಚಿ, ನೆರಳಿಗೆ ಷಾಮೀಯಾನದ ವ್ಯವಸ್ಥೆ ಮಾಡಿದೆ.
ಈ ಸಮಾವೇಶದ ಮೂಲಕ ನಗರದಲ್ಲಿ ಜೆಡಿಎಸ್ ಹವಾ ಎಬ್ಬಿಸುತ್ತಾ ಎಂಬುದನ್ನು ಕಾದು ನೋಡಬೇಕು.