
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.05: ಕಳೆದ ಎರೆಡು ದಿನಗಳ ಕಾಲ ಸುರಿದ ಮಳೆಯಿಂದ ಹಾನಿಗೊಳಗಾದ ತಾಲೂಕಿನ ಮೋಕಾ ಸುತ್ತಮುತ್ತಲಿನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಅಧಿಕಾರಿಗಳೊಂದಿಗೆ ನಿನ್ನೆ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಸಮೋಕಾ, ಗೋಟೂರು, ಇಬ್ರಾಹಿಂಪುರ ಗ್ರಾಮದಲ್ಲಿ ಮಳೆ ನೀರಿನಿಂದ ಹಾಳಾದ ಬೆಳೆ ಮತ್ತು ಮನೆಗಳಿಗೆ ನೀರು ನುಗ್ಗಿ ಹಾಗಿರುವ ಹಾನಿ ಕಂಡು ಮರುಗಿದರು. ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರು ನೆರವಿನ ಆಸರೆಗೆ ಮನವಿ ಮಾಡಿದರು.
ತಹಸಿಲ್ದಾರ್ ವಿಶ್ವನಾಥ್ ಮತ್ತು ಇತರೇ ಅಧಿಕಾರಿಗಳಿಗೆ ಈ ಕೂಡಲೇ ಸರ್ವೇ ಮಾಡಿ ಹಾನಿ ಬಗ್ಗೆ ವರದಿ ನೀಡಿ ಸರ್ಕಾರದ ನಿಯಮದಂತೆ ಪರಿಹಾರ ಒದಗಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು. ಮೋಕಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಮಣ್ಣ, ಮುಖಂಡರಾದ ಬಳ್ಳಾರಿ ಮುತ್ತು ಮೊದಲಾದವರು ಇದ್ದರು.
Attachments area