
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ : ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎನ್ನುವುದಕ್ಕೆ ಬಳ್ಳಾರಿ ಜಿಲ್ಲಾಧಿಕಾರಿ ವರ್ಗಾವಣೆ ಪ್ರಕರಣ ಸಾಕ್ಷಿ ಎನ್ನಬಹುದಾಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಹೇಳಿಕೆಯಂತೆ ವರ್ಗಾವಣೆ ಒಂದು ದಂಧೆಯಾಗಿದೆ. ವರ್ಗ ಮಾಡ್ತಾರೆ, ತಡೆ ಹಿಡಿತಾರೆ, ಮತ್ತೆ ನೇಮಕ ಮಾಡ್ತಾರೆ ಎಂಬಂತೆ ಆಗಿದೆ
ಬಳ್ಳಾರಿ ಜಿಲ್ಲಾಧಿಕಾರಿ ಹುದ್ದೆ.

ಜುಲೈ 17 ರಂದು ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರನ್ನು ಹುದ್ದೆ ತೋರಿಸದೆ ವರ್ಗಮಾಡಿತ್ತು ಸರ್ಕಾರ. ಈ ಜಾಗಕ್ಕೆ ಕಳೆದ ಒಮನದು ವರ್ಷದ ಹಿಂದಷ್ಟೇ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದ, ಈ ಮೊದಲು ಬಳ್ಳಾರಿಯಲ್ಲಿ ಎಡಿಸಿಯಾಗಿ ಕಾರ್ಯನಿರ್ವಹಿಸಿದ್ದ ಟಿ.ವೆಂಕಟೇಶ್ ಅವರನ್ನು
ವರ್ಗಾವಣೆ ಮಾಡಲಾಗಿತ್ತು.

ವಿಜಯನಗರದ ನೂತನ ಡಿಸಿಗೆ ಅಧಿಕಾರ ಹಸ್ತಾಂತರ ಮಾಡಿ ಬಳ್ಳಾರಿಗೆ ಚಾರ್ಜ್ ತೆಗೆದುಕೊಳ್ಳಲು ಜು 18 ರಂದು ಬಂದ ವೆಂಕಟೇಶ್ ಅವರಿಗೆ. ಮೌಖಿಕವಾಗಿ ಚಾರ್ಜ್ ತೆಗೆದುಕೊಳ್ಳದಂತೆ ತಡೆಹಿಡಿದಿತ್ತು.
ನಂತರ ಬೆಂಗಳೂರಿಗೆ ತೆರಳಿದ ವೆಂಕಟೇಶ್ ಅವರ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಮಾಡಿದ ಪಯತ್ನ ಕೈಗೂಡಿದಂತೆ ಇಲ್ಲ.
ಕೊನೆಗೆ ನಿನ್ನೆ ರಾತ್ರಿ ಮುಂದಿನ ಆದೇಶದ ವರೆಗೆ ವೆಂಕಟೇಶ್ ಅವರ ವರ್ಗಾವಣೆಯನ್ನು ತಡೆದ ಸರ್ಕಾರದ ಆದೇಶ ಹೊರಬಿದ್ದಿದೆ.
ಈ ವಿಚಾರದಲ್ಲಿ ಜಿಲ್ಲೆಯ ಕಾಂಗ್ರೆಸ್ ಸಚಿವ, ಶಾಸಕರ ಮಧ್ಯೆ ವರ್ಗವಣೆಯ ಹಣದ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗುತ್ತಿದೆ.

ಬಲ್ಲ ಮೂಲಗಳ ಪ್ರಕಾರ
ಕ್ರೀಡಾ ಸಚಿವ ನಾಗೇಂದ್ರ ವರ್ಸ್ಸ್ ಸಂಡೂರು ಶಾಸಕ ಈ ತುಕಾರಾಂ ಮಧ್ಯೆ ಇರುವ ಭಿನ್ನಾಭಿಪ್ರಾಯ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಸಚಿವ ನಾಗೇಂದ್ರ ಅವರು ವಯಕ್ತಿಕ ಹಿತಾಸಕ್ತಿ ಮೇರೆಗೆ ವೆಂಕಟೇಶ ಅವರನ್ನು ವರ್ಗಾವಣೆ ಮಾಡಿಸಿದ್ದಾರೆಂದು ಶಾಸಕ ತುಕಾರಾಂ ಅವರ ಆರೋಪವಾಗಿದೆ. ಆದ್ರೇ ಇದೆಲ್ಲವೂ ಹಣಕಾಸಿನ ವಿಚಾರಕ್ಕೆ ತಡೆಹಿಡಿಯಲಾಗಿದೆ ಎನ್ನಲಾಗ್ತಿದೆ.

ವರ್ಗಾವಣೆ ದಂಧೆ ಆರೋಪಗಳ ಮಧ್ಯೆ ಬಳ್ಳಾರಿ ಡಿಸಿ ವರ್ಗಾವಣೆ ಸಿದ್ದರಾಮಯ್ಯ ಅವರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆಯಂತೆ.