ಬಳ್ಳಾರಿ ಜೆಸ್ಕಾಂಎಕ್ಸಿಕ್ಯೂಟಿವ್ ಇಂಜಿನೆಯರ್ ಹುಸೇನ್ ಮನೆ ಮೇಲೆ ಲೋಕಾಯುಕ್ತ ದಾಳಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಏ,24- ರಾಜ್ಯದ ಹಲವಡೆಯಂತೆ ಬಳ್ಳಾರಿ‌ ನಗರದ ಜೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನೆಯರ್ ಮನೆ ಮೇಲೆ ಸಹ ಇಂದು ಲೋಕಾಯುಕ್ತ ದಾಳಿ ಮಾಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಬಳ್ಳಾರಿಯಲ್ಲಿಯೇ ಬೀಡು ಬಿಟ್ಟು ಆದಾಯಕ್ಲಿಂತ  ಹೆಚ್ಚು ಆಸ್ತಿ ಸಂಪಾದನೆ ಮಾಡಿರುವ ಆರೋಪದಡಿ  ಹುಸೇನ್ ಸಾಬ್ ಮನೆ ಮೇಲೆ ದಾಳಿ ಮಾಡಲಾಗಿದೆ.
ಬಳ್ಳಾರಿಯ ರಾಘವೇಂದ್ರ ಕಾಲೋನಿಯ ಮನೆ ಮತ್ತು ಹೊಸಪೇಟೆಯ ಅವರ ನಿವಾಸ ಸೇರಿ ಒಟ್ಟು ಆರು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.
ಬಳ್ಳಾರಿ, ಕೊಪ್ಪಳ ಸೇರಿದಂತೆ ಇತರೆ ಜಿಲ್ಲೆಯ ಅಧಿಕಾರಿಗಳಿಂದ ಡಿವೈಎಸ್ಪಿ ರಾಮರಾವ್ ನೇತೃತ್ದಲ್ಲಿ  ದಾಳಿ ನಡೆದಿದೆ.
ಸರ್ಕಾರದ ಕಾಮಗಾರಿಗಳ ಟೆಂಡರ್ ಗೆ ಹೆಚ್ಚಿನ ಧರ ವಿಧಿಸಿ ಅಕ್ರಮವಾಗಿ  ಹಣ ಗಳಿಸುತ್ತಿದ್ದ ಎಂಬ ಪ್ರಮುಖ ಆರೋಪ ಇವರ ಮೇಲೆ ಕೇಳಿ‌ಬರುತ್ತಿತ್ತು. ವಿಮ್ಸ್ ಆಸ್ಪತ್ರೆಯ 65 ಲಕ್ಷ ರೂಗಳ‌ ಒಂದು ಕಾಮಗಾರಿಗೆ ಎರೆಡು ಕೋಟಿ ರೂ ಡಿಪಿಆರ್ ಮಾಡಿ ಲ್ಯಾಂಡ್ ಆರ್ಮಿ ಅಧಿಕಾರಿಗಳಿಂದಲೇ ಹಣ ಲಪಟಾಯಿಸಿದ ಆರೋಪ ಇದೆ.

One attachment • Scanned by Gmail