ಬಳ್ಳಾರಿ ಜೀನ್ಸ್ ರಾಜಧಾನಿ ಮಾಡುವುದು ಖಚಿತ: ರಾಹುಲ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಏ 26: ಕಾಂಗ್ರೆಸ್ ಚುನಾವಣಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಬಳ್ಳಾರಿಯ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಪ್ರಚಾರದ ಪ್ರಜಾ ಧ್ವನಿ ಸಮಾವೇಶ ಇಂದು ಸಂಜೆ ನಡೆಯಿತು.

ಸಮಾವೇಶದಲ್ಲಿ ಪಾಲ್ಗೊಂಡ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಮಾತನಾಡಿ ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಕೊಡಿ. ಕಳೆದ ಬಾರಿ ಕರ್ನಾಟಕದ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಶೆಯಂತೆ ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತಂದಿದೆ.

ನಾನು ಹೇಳಿದ್ದನ್ನು ಮಾಡೇ ಮಾಡುತ್ತೇನೆ. ಬಳ್ಳಾರಿಯನ್ನು ಜೀನ್ಸ್ ರಾಜಧಾನಿಯನ್ನಾಗಿ ಮಾಡಲಿದೆಂದು ಹೇಳಿತ್ತು. ಈ ಮಾತನ್ನು ಸಹ ಈಡೇರಿಸಲಿದೆ. ಜೀನ್ಸ್ ಪಾರ್ಕ್ ಮಾಡಲಿದೆ.
ಈ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಬಳಿ‌ ಮಾತನಾಡಿರುವೆ ಜೀನ್ ಪಾರ್ಕ್ ಆಗಲಿದೆಂದರು.

ಈ ಬಾರಿಯ ಚುನಾವಣೆ ಲೋಕತಂತ್ರ ಮತ್ತು ಸಂವಿಧಾನ ರಕ್ಷಣೆಗಾಗಿ‌ ನಡೆಯುವ ಚುನಾವಣೆಯಾಗಿದೆ. ಈ‌ ಬಾರಿ ಚುನಾವಣೆ ಗೆದ್ದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿ ಹೇಳಿದ್ದಾರೆ.
ಬಡಜನತೆಗೆ, ಹಿಂದುಳಿದ, ದುರ್ಬಲವರ್ಗಕ್ಕೆ ಸಂವಿಧಾನ ಬರವ ಮುನ್ನ ಅವರಿಗೆ ಯಾವುದೇ ಹಕ್ಕು ಇರಲಲ್ಲ. ಸ್ವಾತಂತ್ರ್ಯ ನಂತರ ಸಂವಿಧಾನ ರಚಿಸಿ ಅವರಿಗೆ ಹಲವು ಹಕ್ಕು ನೀಡಿದೆ.

ದೇಶದ ಹಿಂದುಳಿದ ಆದಿವಾಸಿ, ಅಲ್ಪಸಂಖ್ಯಾತರಿಗೆ ಹೇಳ ಬಯಸುವೆ ಸಂವಿಧಾನ ರಕ್ಷಣೆಗೆ ಇಂಡಿಯಾ ಕೂಟ ಬದ್ದವಾಗಿದೆಂದರು.

ಮೋದಿ ಅವರು ಶ್ರೀಮಂತರಿಗೆ ಹಣ ನೀಡಿದರೆ ನಾವು ಬಡವರಿಗೆ ನೀಡುತ್ತೇವೆ ಎಂಬುದಕ್ಕೆ ಕರ್ನಾಟಕ ಸರ್ಕಾರವೇ ಸಾಕ್ಷಿ, ಮಹಿಳೆಯರಿಗೆ ಎರೆಡು ಸಾವಿರ, 10 ಕಿಲೋ ಅಕ್ಕಿ, ಎರೆಡು ನೂರು ಯೂನಿಟ್ ವಿದ್ಯುತ್ ನೀಡುತ್ತಿದೆ. ಉಚಿತ ಬಸ್ ಪ್ರಯಾಣ ಸೌಲಭ್ಯ ಮಹಿಳೆಯರಿಗೆ ನೀಡಿದೆ.

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಡೆ ತೆರಳಿ ಬಡವರ ಪಟ್ಟಿ ಮಾಡಲಿದೆ. ಆ ಮೂಲಕ ಕುಟುಂಬದ ಓರ್ವ ಮಹಿಳೆಯರಿಗೆ ಮಹಾಲಕ್ಷಿ ಯೋಜನೆ ಮೂಲಕ ವಾರ್ಷಿಕ ಒಂದು ಲಕ್ಷ ರೂ ನೀಡಲಿದೆ.

ಪ್ರತಿ ತಿಂಗಳು ಮೊದಲ ತಾರೀಖಿಗೆ 8500 ರೂ ನಿಮ್ಮ ಖಾತೆಗೆ ಬೀಳುತ್ತೆ. ರಾಜ್ಯದ ಎರೆಡು ಸಾವಿರ ಸೇರಿ ಹತ್ತು ಸಾವಿರದ ಐದು ನೂರು ರೂಪಾಯಿ ಬರಲಿದೆ.ದೇಶದ ಕೋಟ್ಯಾಂತರ ಜನರಿಗೆ ಈ ಸೌಲಭ್ಯ ನೀಡಲಿದೆಂದರು.

ಪ್ರಧಾನಿಯವರು ಯುವ ಜನತೆಗೆ ಉದ್ಯೋಗ ವಿಲ್ಲವೆಂದರೆ ಪಕೋಡ ಮಾಡಿ ಮಾರಾಟ ಮಾಡಿ ಎಂದು ಹೇಳುತ್ತಾರೆ.ಆದರೆ ನಾವು ಹೇಳುತ್ತೇವೆ ನಿರುದ್ಯೋಗಿ ಪದವೀಧರರಿಗೆ ಸಾರ್ವಜನಿಕ ಉದ್ದಿಮೆಗಳಲ್ಲಿ ಅಪ್ರೆಂಟಿಸಿಫ್ ಮೂಲಕ ತರಬೇತಿ ನೀಡಲಿದೆ. ಒಂದು ವರ್ಷಕ್ಕೆ ಒಂದು ಲಕ್ಷ ರೂ ನೀಡಲಿದೆ.
ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ದ್ವಿಗುಣ ಮಾಡಲಿದೆ. ನರೇಗ ಕೂಲಿ 400 ರೂ ನೀಡಲಿದೆ. ರೈತರಿಗೆ ಮೋದಿಯವರು 20 ಜನ ಉದ್ದಿಮೆದಾರರ 16 ಲಕ್ಷ ಕೋಟಿ ರೂ ಸಾಲನ್ನ‌ಮಾಡಿದರು. ನಸವು ಅಧಿಕಾರಕ್ಕೆ ಬಂದರೆ ಎಲ್ಲಾ ರೈತರ ಸಾಲ ಮನ್ನಾ ಮಾಡಲಿದೆ. ನ್ಯಾಯಯುತವಾದ ಬೆಂಬಲ ಬೆಲೆ ನೀಡಲಿದೆ.
ಅಗ್ನಿವೀರ ಯೋಜನೆ ರದ್ದು ಮಾಡಲಿದೆ. ಜಿಎಸ್ ಟಿ ಬದಲಾಯಿಸಲಿದೆ. ಬಡವರ ಪರವಾದ, ಸರಳವಾದ ಜಿಎಸ್ ಟಿ ತರಲಿದೆ.
ಬಿಜೆಪಿ ಎಂದರೆ ಭಾರತೀಯ ಚಂಬು ಪಾರ್ಟಿಯಾಗಿದೆ. ಖಾಲಿ ಚಂಬು ನೀಡಿದೆ.
ಕರ್ನಾಟಕ ದೇಶಕ್ಕೆ ನೂರು‌ ರೂ ತೆರಿಗೆ ನೀಡಿದರೆ ಕರ್ನಾಟಕಕ್ಕೆ ಕೇವಲ 13 ರೂ ನೀಡುತ್ತಿದೆ.
ಬರ ಪರಿಹಾರ ನೀಡಿಲ್ಲ. ಹಣಕಾಸು ಆಯೋಗ ಏಳು ಸಾವಿರ ಕೋಟಿ ಕೊಡಲಿಲ್ಲ ಎಂದರು.

ಸಮಾವೇಶದಲ್ಲಿ ಪಕ್ಷದ ಕರ್ನಾಟಕದ ಉಸ್ತುವಾರಿ ರಣದೀಪ್ ಸುರ್ಜಿವಾಲಾ, ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಸಚಿವರಾದ ಸಂತೋಷ್ ಲಾಡ್, ಶಿವರಾಜ್ ತಂಗಡಗಿ, ಬಿ.ನಾಗೇಂದ್ರ, ಜಮೀರ್ ಅಹಮ್ಮದ್, ಶಾಸಕರು, ಪಕ್ಷದ ಬಳ್ಳಾರಿ ಅಭ್ಯರ್ಥಿ ತುಕರಾಂ, ಕೊಪ್ಪಳ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಇದ್ದರು.

ಮತ ಕೇಳಲಿಲ್ಲ:
ಸಮಾವೇಶದಲ್ಲಿ ದೊಡ್ಡದಾಗಿ ಭಾಷಣ ಮಾಡಿದ ರಾಹುಲ್ ಕೊನೆಯವರೆಗೂ ತಮ್ಮ ಅಭ್ಯರ್ಥಿಗೆ, ಚಿನ್ಹೆಗೆ ಮತ ನೀಡಿ ಎಂದು ಕೇಳಲೇ ಇಲ್ಲ.

ಗೈರು ಹಾಜರು:
ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ‌ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೈರು ಹಾಜರಾಗಿದ್ದರು.