
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.29: ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ನಮ್ಮ ಜೆಡಿಎಸ್ ಪಕ್ಷ ಕಣಕ್ಕಿಳಿಸಲಿದೆಂದು ಪಕ್ಷದ ಮುಖಂಡ ಮೀನಳ್ಳಿ ತಾಯಣ್ಣ ಹೇಳಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಜೆಡಿಎಸ್ ಕಚಡೆರಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಸೋಮಲಿಂಗನಗೌಡ ಅವರೊಂದಿಗೆ ಸುದ್ದಿಗೋಷ್ಟಿ ನಡೆಸಿ. ಜೆಡಿಎಸ್ ಪಕ್ಷದಿಂದ ರಾಜ್ಯದಲ್ಲಿ ಈಗಾಗಲೇ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆಂದ ಅವರು ಸಂಡೂರು ಕ್ಷೇತ್ರಕ್ಕೆ ಅಭ್ಯರ್ಥಿ ಯನ್ನಾಗಿ ಕುರೆಕುಪ್ಪ ಸೋಮಪ್ಪ ಅವರನ್ನು ಆಯ್ಕೆ ಮಾಡಿದೆ.
ಬಳ್ಳಾರಿ ನಗರದಿಂದ ಮುನ್ನಾಭಾಯ್, ಕಂಪ್ಲಿಯಿಂದ ಕಾಂಗ್ರೆಸ್ ತೊರೆದು ನಾಳೆ ಜೆಡಿಎಸ್ ಸೇರಲಿರುವ ಗಂಗಾವತಿಮೂಲದ ರಾಜುನಾಯಕ್, ಸಿರುಗುಪ್ಪ ಕ್ಷೇತ್ರದಿಂದ ಪರಮೇಶ್ವರ ನಾಯಕ್ ಅವರು ಸ್ಪರ್ಧಿಸಲಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದಿಂದ ಮನೆ ಮನೆಗೆ ಮುನ್ನಬಾಯಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.
ಜೆಡಿಎಸ್ ರಾಜ್ಯದ 123 ಕ್ಷೇತ್ರದಲ್ಲಿ ಗೆಲ್ಲುವ ಗುರಿ ತಲುಪಲುದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸಧ್ಯದಲ್ಲೇ ಪಕ್ಷದ ಮುಖಂಡ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಅಧ್ಯಕ್ಷ ಇಬ್ರಾಹಿಂ ಸಾಬ್ ಅವರ ಕುರುಗೋಡು, ಕಂಪ್ಲಿ, ಬಳ್ಳಾರಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಬಹಿರಂಗ ಸಭೆ ನಡೆಸಲಿದ್ದಾರೆಂದರು.
= ಅನ್ಯಾಯ:
ರಾಜ್ಯದಲ್ಲಿ ಈ ವರಗೆ ಮುಸ್ಲೀಂರಿಗೆ ಇದ್ದ ಮೀಸಲಾತಿ ರದ್ದು ಮಾಡಿದ್ದು ಸರಿಯಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಮೀಸಲಸತಿಯನ್ನು ಮತ್ತೆ ತರಲಿದೆಂದರು
ಎಸ್ಟಿಗಳಿಗೆ ಮೀಸಲಾತಿ ಹೆಚ್ಚಳ ಎಂದರು. ಇನ್ನೂ ಅದಕ್ಕೆ ಕೇಂದ್ರದಲ್ಲಿ ಸಮ್ಮತಿ ಆಗಿಲ್ಲ. ಚುನಾವಣಾ ಸಂದರ್ಭದಲ್ಲಿ ಬಿಜೆಪಿಯಿಂದ ತುಟಿಗೆ ತುಪ್ಪ ಸವರುವ ಕೆಲಸ ಆಗಿದೆಂದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರುಗಳಾದ ಮುನ್ನಾಭಾಯ್, ಬಂಡೆಗೌಡ, ಲಕ್ಷ್ಮೀಕಾಂತರೆಡ್ಡಿ, ವಿಜಯ್ ಕುಮಾರ್ ಮೊದಲಾದವರು ಇದ್ದರು.