ಬಳ್ಳಾರಿ ಜಿಲ್ಲೆ ವಿಭಜನೆ ಕೈಬಿಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ 15ನೇ ದಿನಕ್ಕೆ

ಬಳ್ಳಾರಿ ಡಿ.28, ಬಳ್ಳಾರಿ ಜಿಲ್ಲೆ ವಿಭಜನೆ ಕೈಬಿಡುವಂತೆ ಒತ್ತಾಯಿಸಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಇಂದಿಗೆ 15ನೇ ದಿನಕ್ಕೆ ಕಾಲಿಟ್ಟಿದೆ.
ಧರಣಿಯಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಳ್ಳಾರಿ ವಿಭಜನೆ ಕೈಬಿಡುವಂತೆ ಒತ್ತಾಯಿಸಿದರು.
ಇಂದು ಜಿಲ್ಲಾ ಚಲುವಾದಿ ಮಹಾಸಭಾ ವತಿಯಿಂದ ಧರಣಿಯನ್ನು ನಡೆಸಲಾಯಿತು.
ಚಲುವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ನರಸಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಶಿವಕುಮಾರ್, ಜೆ.ಎಸ್. ಶ್ರೀನಿವಾಸ್, ಗೋನಾಳ್ ಮಾನಯ್ಯ, ಸೂರ್ಯನಾರಾಯಣ, ಸುಂಕಪ್ಪ, ಹಂಪಯ್ಯ, ಜಯಣ್ಣ ನಾಗಲಕೆರೆ ಗೋವಿಂದ, ರಾಜು, ಡಿ.ವಸಂತ ಹಾಗೂ ಹೋರಾಟ ಸಮಿತಿ ಕೆ.ಎರ್ರಿಸ್ವಾಮಿ, ಮೀನಳ್ಳಿ ಚಂದ್ರಶೇಖರ್, ಟಿ.ಜಿ.ವಿಠ್ಠಲ್, ಸಿರಿಗೇರಿ ಪನ್ನರಾಜ್, ಆಟೋ ಬಷೀರ್, ಮುಂತಾದವರು ಭಾಗವಹಿಸಿದ್ದರು.