ಬಳ್ಳಾರಿ ಜಿಲ್ಲೆ ವಿಭಜನೆ ಅಂತಿಮ‌ ನಿರ್ಧಾರ ಆಗಿಲ್ಲ: ಡಿಕೆಶಿ

ಹಿರಿಯೂರು ನ 22 : ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ನೂತನ ವಿಜಯನಗರ ಜಿಲ್ಲೆ ಬಗ್ಗೆ ಇನ್ನೂ ಅಂತಿಮ‌ ನಿರ್ಧಾರ ಆಗಿಲ್ಲ. ಅಖಂಡ ಜಿಲ್ಲೆ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಿ ಪಕ್ಷ ಮುಂದಿನ‌  ನಿರ್ಧಾರ ತೆಗೆದುಕೊಳ್ಳಲಿದೆಂದು ಕೆಪಿಸೊಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಅವರು ಇಂದು ಹೊಸಪೇಟೆಗೆ ಬರುವ ಮುನ್ನ ಇಲ್ಲಿ‌ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಜಯನಗರ ಜಿಲ್ಲೆ ರಚನೆ‌ ಬಗ್ಗೆ ಇನ್ನೂ ಆದೇಶ ಬಂದಿಲ್ಲ.ಆ ಬಗ್ಗೆ ಮಾಧ್ಯಮಗಳಲ್ಲಿ‌ ಓದಿದ್ದೇನೆ ಅಷ್ಟೇ ಎಂದರು.
ಕಾಲೇಜುಗಳ ಆರಂಭದಿಂದ ಕರೋನಾ ಹಬ್ಬುತ್ತಿದೆ ಎಂಬ ಪ್ರಶ್ನೆಗೆ ಈ ಬಗ್ಗೆ ಸರ್ಕಾರ ಎಲ್ಲರಿಗೂ ಉತ್ತಮ ಆರೋಗ್ಯ ಕಲ್ಪಿಸ ಬೇಕು ಆ ನಿಟ್ಟಿನಲ್ಲಿ‌ಚಿಂತಿಸಿ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.