ಬಳ್ಳಾರಿ ಜಿಲ್ಲೆ ವಿಭಜನೆಯಾದರೆ ಬಿಜೆಪಿಗೆ ಜನರಿಂದ ಪಾಠ – ಸೋಮಶೇಖರ ರೆಡ್ಡಿ ಪ್ರತ್ಯೇಕ ಜಿಲ್ಲೆ ವಿರೋಧಿ ಹೋರಾಟಕ್ಕೆ ಬೆಂಬಲ

ಬಳ್ಳಾರಿ ನ 18 : ಇಂದು‌ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ರಚನೆಗೆ ತಾತ್ವಿಕ‌ ಒಪ್ಪಿಗೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ. ಸರ್ಕಾರದ ಈ‌ ನಿರ್ಧಾರದಿಂದ ಜಿಲ್ಲೆಯ ಜನತೆ ಬಿಜೆಪಿಗೆ ಪಾಠ ಕಲಿಸಲಿದ್ದಾರೆ. ಸರ್ಕಾರದ ನಿರ್ಣಯದ ವಿರುದ್ದ ನಡೆವ ಹೋರಾಟಕ್ಕೆ ತಾವು ಬೆಂಬಲ‌ ನೀಡುವುದಾಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಮೊದಲೇ ಜಿಲ್ಲೆಯ ವಿಭಜನೆ ಬೇಡ, ಐತಿಹಾಸಿಕ ಹಂಪಿಯನ್ನು ಹೊಂದಿರುವ ಜಿಲ್ಲೆ ಸಮಗ್ರವಾಗಿ ಇರಲಿ ಎಂದು ಇತರೇ ಶಾಸಕರು, ಸಂಸದರು ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತ್ತು. ಆದರೂ ಮುಖ್ಯ ಮಂತ್ರಿಗಳು ಇದಕ್ಕೆ ಸಮ್ಮತಿ‌ ನೀಡಿದರೆ ಏನು‌ ಮಾಡಲು ಆಗಲ್ಲ. ಆದರೆ ಇದನ್ನು ಜನ ವಿರೋಧಿಸಿ ಹೋರಾಟ ಮಾಡಿದರೆ ಅದಕ್ಕೆ ನಾನು ಬೆಂಬಲ ನೀಡುವೆ ಎಂದ ಅವರು. ಈ ನಿರ್ಧಾರಕ್ಕೆ ಬಳ್ಳಾರಿ ಜನತೆ ಪಾಠ ಕಲಿಸಲಿದ್ದಾರೆ ಎಂದರು. ಯಾರಿಗೆ ಎಂಬ ಪ್ರಶ್ನೆಗೆ ನಮ್ಮ ಬಿಜೆಪಿ ಪಕ್ಷಕ್ಕೆ ಎಂದರು.
ಈಗಾಗಲೇ ಈ ಹಿಂದೆ ಮಾಡಿರುವ ಕೊಪ್ಪಳ, ಯಾದಗಿರಿ ಜಿಲ್ಲೆಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದಿವೆ ಎಂದು ಪ್ರಶ್ನಿಸಿದರು.