ಬಳ್ಳಾರಿ ಜಿಲ್ಲೆ ಎಎಸ್ಪಿಯಾಗಿ ಕಾರ್ಯಭಾರವಹಿಸಿಕೊಂಡ ರವಿಕುಮಾರ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.29: ಜಿಲ್ಲೆಯ ನೂತನ‌ ಹೆಚ್ಚುವರಿ ಎಸ್ಪಿಯಾಗಿ ಕೆ.ಪಿ.ರವಿಕುಮಾರ್ ಅವರು ಇಂದು ಕಾರ್ಯಭಾರವಹಿಸಿಕೊಂಡಿದ್ದಾರೆ.ಈವರಗೆ ಎಂ.ಎ.ನಟರಾಜ್ ಅವರು ಈ ಸ್ಥಾನದಲ್ಲಿದ್ದರು.
ಬೆಂಗಳೂರಿನಲ್ಲಿ ರಾಜ್ಯ ನ್ಯಾಯವಿಜ್ಞಾನ ಪ್ರಯೋಗಾಲಯದ ಜಂಟಿ‌ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರವಿಕುಮಾರ್ ಅವರನ್ನು ಬಳ್ಳಾರಿ ಜಿಲ್ಲಾ ಎಎಸ್ಪಿಯಾಗಿ ಇಲಾಖೆ ವರ್ಗಮಾಡಿತ್ತು.
ರವಿಕುಮಾರ್ ಅವರು ಈ ಹಿಂದೆ ಬಳ್ಳಾರಿ ಗ್ರಾಮೀಣ  ಠಾಣೆಯಲ್ಲಿ ಸರ್ಕಲ್ ಇನ್ಸ್ ಫೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯದ ಖಡಕ್ ಪೊಲೀಸ್ ಅಧಿಕಾರಿಗಳಲ್ಲಿ ಇವರೂ ಒಬ್ಬರು.
ಇನ್ನು ನಗರ ಡಿವೈಎಸ್ಪಿ ಸಹ ಬದಲಾಗಲಿದ್ದು. ಸಧ್ಯದಲ್ಲಿಯೇ ಈ ಸ್ಥಾನಕ್ಕೆ ಚಂದ್ರಕಾಂತ ನಂದರೆಡ್ಡಿ ಎಂಬುವವರು ಬರಲಿದ್ದಾರೆಂಬ ಮಾಹಿತಿ ಇದೆ. ಇವರು ತಮ್ಮ ಕಟ್ಟು‌ನಿಟ್ಟಿನ ಆಡಳಿತದಿಂದ ಹಲವಾರು ಬಾರಿ ವರ್ಗಾವಣೆಯಾಗಿದ್ದಾರಂತೆ.