
* ಮದ್ಯಾಹ್ನ 1 ಕ್ಕೆ ಶೇ 40 ರಷ್ಟು ಮತದಾನ
* ಶೇ 75 ಮತದಾನದ ಸಾಧ್ಯತೆ
* ಸಣ್ಣ ಪುಟ್ಟ ಘರ್ಷಣೆ, ವಾಗ್ವಾದ
* ಶತಾಯುಷಿಗಳಿಂದ ಹಕ್ಕು ಚಲಾವಣೆ
* ಬಿರು ಬಿಸಲಿನಲ್ಲೂ ಬಿರುಸಿನ ಮತದಾನ
* ಗಮನ ಸೆಳೆದ ಸಾಂಪ್ರದಾಯಿಕ ಮತಗಟ್ಟೆಗಳು
ಬಳ್ಳಾರಿ, ಮೇ.10: ಜಿಲ್ಲೆಯ ಕಂಪ್ಲಿ, ಸಿರುಗುಪ್ಪ, ಸಂಡೂರು ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆಯಿಂದ ಆರಂಭಗೊಂಡ ಮತದಾನ ಬಿರು ಬಿಸಿಲಿನಲ್ಲೂ ಬಿರುಸಿನಿಂದ ಸಾಗಿದ್ದು ಮಧ್ಯಾಹ್ನ 1 ಗಂಟೆ ವೇಳಿಗೆ ಶೇ 40 ರಷ್ಟು ಮತದಾನವಾಗಿತ್ತು. ಮುಕ್ತಾಯದ ವೇಳೆಗೆ ಶೇ 75 ಕ್ಕೂ ಹೆಚ್ಚು ಆಗುವ ಸಾಧ್ಯತೆ ಇದೆ.
ಬಳ್ಳಾರಿ ನಗರದಲ್ಲಿ ಕಡಿಮೆ, ಕಂಪ್ಲಿಯಲ್ಲಿ ಹೆಚ್ಚು ಮತದಾನವಾಗುತ್ತಿದೆ. ಮಧ್ಯಾಹ್ನ ಒಂದು ಗಂಟೆಗೆ ಬಳ್ಳಾರಿ ನಗರ-32, ಬಳ್ಳಾರಿ ಗ್ರಾಮೀಣ-40, ಕಂಪ್ಲಿ-50, ಸಿರುಗುಪ್ಪ-43.5, ಸಂಡೂರು ಕ್ಷೇತ್ರದಲ್ಲಿ-35.5 ರಷ್ಟು ಮತದಾನವಾಗಿದೆ.
ಮುಂಜಾನೆ ಮೋಡ ಮುಸುಕಿದ ವಾತಾವರಣದಲ್ಲಿ ಜನತೆ ಮರಗಟ್ಟೆಗಳತ್ತ ಸಾಗಿ ಬಂದು ಸಾಲಲ್ಲಿ ನಿಂತು ಮತ ಚಲಾಯಿಸಿದರು. ನಂತರ ಬಿಸಿಲಿನ ಜಳ ಹೆಚ್ಚುತ್ತಿದ್ದಂತೆ ನಗರ ಪ್ರದೇಶದಲ್ಲಿ ಮತಗಟ್ಟೆಗಳ್ಲಿ ಕಡಿಮೆ ಕಂಡರೆ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿತ್ತು.
ಮತದಾರರಿಗೆ ಮತ ಚಲಾಯಿಸುಲು ಅನುವಾಗುವಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಒಂದೆರೆಡು ಕಡೆ ಮತ ಯಂತ್ರಗಳ ಸಮಸ್ಯೆ ಕಂಡು ಬಂದರೆ ತಕ್ಷಣ ಅಧಿಕಾರುಗಳು ಸರಿಪಡಿಸಿದ್ದಾರೆ.
ಹಾಲಿ ಶಾಸಕರು, ಸಚಿವರು, ಸಂಸದರು, ಮಾಜಿ ಶಾಸಕರು, ಅಭ್ಯರ್ಥಿಗಳು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸಿ ತಮ್ಮ, ತಮ್ಮ ಅಭ್ಯರ್ಥಿಗಳ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಸಂಜೀವರಾಯನಕೋಟೆಯಲ್ಲಿ ಘರ್ಷಣೆ ನಡೆದು ಓರ್ವ ಗಾಯಗೊಂಡಿದ್ದು ಬಿಟ್ಟರೆ ಉಳಿದ ಕೆಲವು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು ಬಿಟ್ಟರೆ ಒಟ್ಟಾರೆ ಶಾಂತಿಯುತ ಮತದಾನ ನಡೆದಿದೆ.
ಕಮ್ಮರ ಚೇಡು, ಬಳ್ಳಾರಿನಗರ ಸೇರಿದಂತೆ ಹಲವಡೆ ಶತಾಯುಷಿಗಳು ಮತ ಚಲಾಯಿಸಿದ್ದಾರೆ.
ಮತಗಟ್ಟೆಗಳ ಮುಂದೆ ಸೂಕ್ತ ಬಂದೋ ಬಸ್ತು ಒದಗಿಸಿತ್ತು
ಶೇ 73.07 ರಷ್ಟು ಮತದಾನ ಕಳೆದ 2018 ರ ಚುನಾವಣೆಯಲ್ಲಿ ಆಗಿತ್ತು.