ಬಳ್ಳಾರಿ,ಏ.22 ವಿಧಾನಸಭಾ ಸಾರ್ವತ್ರಿಕ ಚುನಾವಣೆ – 2023 ಗೆ ಸಂಬಂಧಿಸಿದಂತೆ ನಾಮಪತ್ರಗಳ ಪರಿಶೀಲನೆಯ ದಿನವಾದ ಶುಕ್ರವಾರದಂದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕಂಪ್ಲಿ ವಿಧಾನಸಭಾ ಕ್ಷೇತ್ರದ 7 ಅಭ್ಯರ್ಥಿಗಳ, ಸಿರುಗುಪ್ಪ ವಿಧಾನಸಭಾ ಕ್ಷೇತ್ರದ 11 ಅಭ್ಯರ್ಥಿಗಳ, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 9 ಅಭ್ಯರ್ಥಿಗಳ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 28 ಅಭ್ಯರ್ಥಿಗಳ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದ 8 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
*ಕ್ರಮಬದ್ಧ ನಾಮಪತ್ರಗಳ ವಿವರ:*
91-ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಒಟ್ಟು 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಜನತಾ ದಳ (ಜಾತ್ಯಾತೀತ) ಪಕ್ಷದಿಂದ ನಾಮಪತ್ರ ಸಲ್ಲಿಸಿದ ರಾಜು ನಾಯಕ್ ಅವರ ನಾಮಪತ್ರ, ಭಾರತೀಯ ಜನತಾ ಪಕ್ಷದ ಟಿ.ಹೆಚ್.ಸುರೇಶ್‍ಬಾಬು ಅವರ ನಾಮಪತ್ರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜೆ.ಎನ್.ಗಣೇಶ್ ಅವರ ನಾಮಪತ್ರ, ಬಹುಜನ ಸಮಾಜ ಪಕ್ಷದ ಉತ್ತನೂರು ನಾಗರಾಜ, ಆಮ್ ಆದ್ಮಿ ಪಕ್ಷದ ಹೆಚ್.ಪ್ರಹ್ಲಾದ್ ನಾಯಕ್, ಸೊಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಪಕ್ಷದ ಎ.ದೇವದಾಸ್, ದೇಶ ಪ್ರೇಮ ಪಕ್ಷದ ಅಭ್ಯರ್ಥಿ ರಾಮಕ್ಕ.ಟಿ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ. 1 ನಾಮಪತ್ರ ತಿರಸ್ಕೃತವಾಗಿದೆ.
92-ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಚುನಾವಣೆಗಾಗಿ ಒಟ್ಟು 11 ನಾಮಪತ್ರಗಳು ಕ್ರಮಬದ್ಧವಾಗಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಬಿ.ಎಂ.ನಾಗರಾಜ ಅವರ ನಾಮಪತ್ರ, ಜನತಾದಳ (ಜಾತ್ಯಾತೀತ) ಪಕ್ಷದಿಂದ ಬಿ.ಪರಮೇಶ್ವರ, ಆಮ್ ಆದ್ಮಿ ಪಕ್ಷದಿಂದ ಬಿ.ಲೋಕೇಶ್, ಭಾರತೀಯ ಜನತಾ ಪಕ್ಷದಿಂದ ಎಮ್.ಎಸ್.ಸೋಮಲಿಂಗಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಟಿ.ದರಪ್ಪ ನಾಯಕ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ದೊಡ್ಡಯಲ್ಲಪ್ಪ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಕ್ಷದಿಂದ ಎಮ್.ಎಚ್.ವೀರೇಶಪ್ಪ ಹುಣಸೇಮರದವರು, ಪಕ್ಷೇತರ ಅಭ್ಯರ್ಥಿ
ಈರಬಸಮ್ಮ ಹುಣಸೇಮರದವರು, ಪಕ್ಷೇತರ ಅಭ್ಯರ್ಥಿ ಎಂ.ಎಸ್‍ಗಾದಿಲಿಂಗಪ್ಪ, ಪಕ್ಷೇತರ ಅಭ್ಯರ್ಥಿ ಹೆಚ್.ಸಿ.ರಾಧ ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತ.ಎಸ್ ಇವರ ನಾಮಪತ್ರಗಳು ನಾಮಪತ್ರಗಳು ಕ್ರಮಬದ್ಧವಾಗಿವೆ. 4 ನಾಮಪತ್ರ ತಿರಸ್ಕೃತವಾಗಿವೆ.
93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗಾಗಿ ಒಟ್ಟು 09 ನಾಮಪತ್ರಗಳು ಕ್ರಮಬದ್ಧವಾಗಿವೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜಾಲಿಯಳ ರುದ್ರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಬಿ.ನಾಗೇಂದ್ರ, ಬಹುಜನ ಸಮಾಜ ಪಕ್ಷದಿಂದ ನಾಯಕರ ಕ್ರಿಷ್ಣಪ್ಪ, ಭಾರತೀಯ ಜನತಾ ಪಕ್ಷದಿಂದ ಬಿ.ಶ್ರೀರಾಮುಲು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವಾಲ್ಮೀಕಿ ಯುಗಂಧರ, ಪಕ್ಷೇತರ ಅಭ್ಯರ್ಥಿ ಟಿ.ಹೆಚ್.ಮಲ್ಲಿಕಾರ್ಜುನ, ಪಕ್ಷೇತರ ಅಭ್ಯರ್ಥಿ ಬಿ.ವೆಂಕಟೇಶ ಪ್ರಸಾದ್, ಪಕ್ಷೇತರ ಅಭ್ಯರ್ಥಿ ಕೆ.ಶಂಭುಲಿಂಗ, ಪಕ್ಷೇತರ ಅಭ್ಯರ್ಥಿ ಬಿ.ಷಣ್ಮುಖ ನವೀನ್ ಬಾಬು ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ. 1 ನಾಮಪತ್ರ ತಿರಸ್ಕೃತವಾಗಿದೆ.
94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗಾಗಿ ಒಟ್ಟು 28 ನಾಮಪತ್ರಗಳು ಕ್ರಮಬದ್ಧವಾಗಿವೆ. ಭಾರತೀಯ ಜನತಾ ಪಕ್ಷದ ಜಿ.ಸೋಮಶೇಖರ ರೆಡ್ಡಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ನಾರಾ ಭರತ್ ರೆಡ್ಡಿ, ಬಹುಜನ ಸಮಾಜ ಪಕ್ಷದಿಂದ ಬಾಬು.ಕೆ, ಆಮ್ ಆದ್ಮಿ ಪಕ್ಷದಿಂದ ದೊಡ್ಡಕೇಶವ ರೆಡ್ಡಿ, ಜನತಾ ದಳ (ಜಾತ್ಯಾತೀತ) ಅನೀಲ್ ಹೆಚ್ ಲಾಡ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆ.ಶ್ರೀನಿವಾಸ ರೆಡ್ಡಿ, ಸೊಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಪಕ್ಷದ ಆರ್.ಸೋಮಶೇಖರ ಗೌಡ, ಜನಹಿತ ಪಕ್ಷದ ಆಲೇಶ್ವರ ಗೌಡ.ಹೆಚ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಲಕ್ಷ್ಮೀ ಅರುಣ.ಜಿ, ದೇಶ ಪ್ರೇಮ ಪಕ್ಷದ ಡಾ.ಕೆ.ಆರ್.ರವಿಕುಮಾರ್, ಸಮಾಜವಾದಿ ಪಕ್ಷದ ಆರ್.ವೇಣುಗೋಪಾಲ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ಸಿ.ಶರಣಬಸಪ್ಪ, ಪಕ್ಷೇತರ ಅಭ್ಯರ್ಥಿ ಅಶೋಕ ಕುಮಾರ್ ರೆಡ್ಡಿ.ಪಿ.ವಿ, ಪಕ್ಷೇತರ ಅಭ್ಯರ್ಥಿ ಬ್ರಹ್ಮಿಣಿ ರೆಡ್ಡಿ. ಜಿ, ಪಕ್ಷೇತರ ಅಭ್ಯರ್ಥಿ ಪಿ.ಚಾಂದ್‍ಬಾಷಾ, ಪಕ್ಷೇತರ ಅಭ್ಯರ್ಥಿ ಮೊಹಮ್ಮದ್ ರಿಯಾಜ್ ಅಹಮ್ಮದ್, ಪಕ್ಷೇತರ ಅಭ್ಯರ್ಥಿ ಜಿ.ವಿಜಯಮ್ಮ, ಪಕ್ಷೇತರ ಅಭ್ಯರ್ಥಿ ಜಾಕೀರ್, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್, ಪಕ್ಷೇತರ ಅಭ್ಯರ್ಥಿ ಕಂದೂರಿ ಅಜೇಯ ಕುಮಾರ್, ಪಕ್ಷೇತರ ಅಭ್ಯರ್ಥಿ ಉಪ್ಪಾರ ಅನೀಲ್‍ಕುಮಾರ್, ಪಕ್ಷೇತರ ಅಭ್ಯರ್ಥಿ ಗಂಗಿರೆಡ್ಡಿ, ಪಕ್ಷೇತರ ಅಭ್ಯರ್ಥಿ ಬಿ.ಆರ್.ಮಂಜುನಾಥ, ಪಕ್ಷೇತರ ಅಭ್ಯರ್ಥಿ ನಾರಾಯಣಸ್ವಾಮಿ, ಪಕ್ಷೇತರ ಅಭ್ಯರ್ಥಿ ಶ್ರೀಧರ್.ಕೆ, ಪಕ್ಷೇತರ ಅಭ್ಯರ್ಥಿ ಕೆ.ಭರತ್‍ಬಾಬು, ಪಕ್ಷೇತರ ಅಭ್ಯರ್ಥಿ ಎಸ್.ಬಿ.ಶಿವಕುಮಾರ್, ಪಕ್ಷೇತರ ಅಭ್ಯರ್ಥಿ ಅಹಮ್ಮದ್ ಮೊಹಮ್ಮದ್ ಇವರುಗಳ ನಾಮಪತ್ರಗಳು ನಾಮಪತ್ರಗಳು ಕ್ರಮಬದ್ಧವಾಗಿವೆ. 2 ನಾಮಪತ್ರ ತಿರಸ್ಕೃತವಾಗಿವೆ.
95-ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗಾಗಿ ಒಟ್ಟು 08 ನಾಮಪತ್ರಗಳು ಕ್ರಮಬದ್ಧವಾಗಿವೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೆ.ಆರ್.ಕುಮಾರ್ ಸ್ವಾಮಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಈ.ತುಕಾರಾಮ್, ಬಹುಜನ ಸಮಾಜ ಪಕ್ಷದಿಂದ ಶಕುಂತಲ.ಕೆ, ಭಾರತೀಯ ಜನತಾ ಪಕ್ಷದಿಂದ ಶಿಲ್ಪಾ ಪಾಟೀಲ್, ಜನತಾದಳ (ಜಾತ್ಯಾತೀತ) ಪಕ್ಷದಿಂದ ಸೋಮಪ್ಪ.ಎನ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೆ.ಎಸ್.ದಿವಾಕರ, ಕೆಆರ್‍ಎಸ್ ಪಕ್ಷದ ವೇಬಾ ಕುಮಾರಿ, ಸ್ವತಂತ್ರ ಪಕ್ಷದ ಗೆರೆಗಲ್ ಪಾಪಯ್ಯ ಅವರ ನಾಮಪತ್ರಗಳು ಕ್ರಮಬದ್ಧವಾಗಿದೆ. 1 ನಾಮಪತ್ರ ತಿರಸ್ಕೃತವಾಗಿದೆ.
ಒಟ್ಟಾರೆಯಾಗಿ 9 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.