ಬಳ್ಳಾರಿ ಜಿಲ್ಲೆಯಾದ್ಯಂತ ಸಂಭ್ರಮದ ದೀಪಾವಳಿ, ಲಕ್ಷ್ಮಿ ಪೂಜೆ

ಬಳ್ಳಾರಿ, ನ.15:- ಕೋವಿಡ್ ಮಹಾಮಾರಿ ಹಿನ್ನಲೆಯಲ್ಲಿ ಈ ಬಾರಿ ದೀಪಾವಳಿಯನ್ನು ಜನತೆ ಸರಳವಾಗಿ ಆಚರಿಸುವಂತೆ ಸರ್ಕಾರ ಕರೆ ನೀಡಿದ್ದರೂ ಬಳ್ಳಾರಿ ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಜನತೆ ಮಾತ್ರ ಸಂಭ್ರಮದಿಂದಲ್ಲೇ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಪಟಾಕಿಗಳ ಸಿಡಿತವು ಸಾಧಾರಣವಾಗಿ ಕೇಳಿಬಂದಿತು.
ಅಂಗಡಿ, ದೇವಸ್ಥಾನಗಳನ್ನು ಬಾಳೆ ಗಿಡ, ಹೂವುಗಳಿಂದ ವಿಶೇಷವಾಗಿ ಅಲಂಕರಿಸಿದ್ದು ಕಂಡುಬಂದಿತು. ದೀಪಾವಳಿಯ ಅಂಗವಾಗಿ ನಿನ್ನೆ ಸಂಜೆ ಹಾಗೂ ಇಂದು ಬೆಳಿಗ್ಗೆ ಮನೆ, ಅಂಗಡಿ, ದೇವಸ್ಥಾನಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಮನೆ ಮತ್ತು ಅಂಗಡಿಗಳಲ್ಲಿ ಬೆಳ್ಳಿ, ಬಂಗಾರದ ಲಕ್ಷ್ಮಿಮೂರ್ತಿಗೆ ಪೂಜಾಲಂಕಾರ ಮಾಡಿ, ಗರಿಗರಿ ನೋಟು, ಸಿಹಿದಿನಿಸುಗಳ ಇಟ್ಟು ವಿಶೇಷ ಪೂಜೆ ಸಲ್ಲಿಸಿ ಜನತೆ ಸಂಭ್ರಮಿಸಿತು.
ಕೋವಿಡ್ ಹಿನ್ನಲೆಯಲ್ಲಿಯೂ ಸಹ ಜನತೆ ಸಂಭ್ರಮದಿಂದ ಹಬ್ಬದಲ್ಲಿ ಭಾಗವಹಿಸಿದ್ದು ಮಕ್ಕಳು, ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು ಹಬ್ಬಕ್ಕೆ ರಂಗುತಂದಿದ್ದರು.