ಬಳ್ಳಾರಿ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಆರ್ಭಟ ಔಷಧಿ ಕೊರತೆ ಆರು ಜನ ಬಲಿ

A doctor assists a Covid-19 coronavirus patient with Black Fungus, a deadly and rare fungal infection, as he receives treatments at the NSCB hospital in Jabalpur, on May 20, 2021. (Photo by Uma Shankar MISHRA / AFP)

ಬಳ್ಳಾರಿ ಮೇ 28 :‌ಕರೋನಾದಂತೆ ಬ್ಲಾಕ್ ಫಂಗಸ್ ಸೋಂಕು ಸಹ ಗಣಿನಾಡಿನ‌ ಜನರನ್ನು ಕಾಡುತ್ತಿದೆ. ಈವರೆಗೆ ಈ ಸೋಂಕಿಗೆ ಆರು ಜನ ಜನ‌ಬಲಿಯಾಗಿದ್ದು. ಬಲ್ಲ ಮೂಲಗಳ ಪ್ರಕಾರ ಈ ಸೋಂಕಿನ‌ ಚಿಕಿತ್ಸೆಗೆ ಔಷಧಿ ಕೊರತೆ ಎದುರಾಗಿದೆ.
ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್ ಸೋಂಕಿತರಿಗಾಗಿ ಪ್ರತ್ಯೇಕ ವಾರ್ಡ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವರಗೆ ಜಿಲ್ಲೆಯ 41 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು ಆರು ಜನರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಬ್ಲ್ಯಾಕ್ ಫಂಗಸ್ ಗೆ ಔಷಧಿ ಕಳಿಸುವಂತೆ ಜಿಲ್ಲಾಡಳಿತ ರಾಜ್ಯ ಸರ್ಕಾರವನ್ನು ಕೇಳಿದ್ದು ಬೆಟ್ಟದಷ್ಟು. ಆದರೆ ಬಂದಿದ್ದು ಸಾಸುವೆಯಷ್ಟಾಗಿದೆ.
ಎರಡ ನೂರು
ಬ್ಲಾಕ್ ಫಂಗಸ್ ರೋಗಿಗೆ ಔಷಧಿ (ಇಂಜೆಕ್ಷನ್) ಕಳಿಸಲು ಕೋರಿತ್ತು. ಆದರೆ ಬಂದಿರೋದು ಕೇವಲ ಹತ್ತು ಮಾತ್ರ ಇದನ್ನು ಯಾರಿಗೆ ಕೊಡಬೇಕು ಯಾರಿಗೆ ಬಿಡಬೇಕು ಅನ್ನೊದೇ ದೊಡ್ಡ ಪ್ರಶ್ನೆಯಾಗಿದೆಯಂತೆ ಇಲ್ಲಿನ ವೈದ್ಯರಿಗೆ.
ಮತ್ತಷ್ಟು ಇಂಜೆಕ್ಷನ್ ಕಳುಹಿಸುವಂತೆ ಮನವಿ‌ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳುತ್ತಿವೆ. ಯಾವಾಗ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.