ಬಳ್ಳಾರಿ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ: ಡಿಸಿ ನಕುಲ್

ಬಳ್ಳಾರಿ,ಆ.26: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ.ಸಮರ್ಪಕವಾದ ಆಕ್ಸಿಜನ್ ಪ್ರಮಾಣ ನಮ್ಮಲ್ಲಿದೆ. ಆಕ್ಸಿಜನ್ ಸಮರ್ಪಕ ಪೂರೈಕೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು,ಯಾವುದೇ ರೀತಿಯ ತೊಂದರೆಯಿಲ್ಲದಂತೆ ಪ್ರತಿನಿತ್ಯ ನಿರ್ವಹಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ 1500ಕ್ಕೂ ಹೆಚ್ಚು ಆಕ್ಸಿಜನ್ ಬೆಡ್‍ಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 350 ಆಕ್ಸಿಜನ್ ಬೆಡ್‍ಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್ ಮತ್ತು ನಾನ್ ಕೋವಿಡ್‍ಗಾಗಿ 88 ವೆಂಟಿಲೇಟರ್‍ ಗಳು ಲಭ್ಯವಿವೆ.
ಎಲ್ಲ ರೀತಿಯ ಸಲಕರಣೆಗಳಿಗೆ ಮತ್ತು ಆಕ್ಸಿಜನ್ ಬೆಡ್‍ಗಳಿಗೆ ಯಾವುದೇ ರೀತಿಯ ಆಕ್ಸಿಜನ್ ತೊಂದರೆಯಾಗದಂತೆ ನಿರ್ವಹಿಸುವ ನಿಟ್ಟಿನಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಜಂಬೋ ಸಿಲಿಂಡರ್ ಗಳ ಮುಖಾಂತರ, ಜಿಲ್ಲಾಸ್ಪತ್ರೆಯಲ್ಲಿ 6ಕಿಲೋಲೀಟರ್ ಲಿಕ್ವಿಡ್ ಆಕ್ಸಿಜನ್ ಕಂಟೈನರ್ ಮುಖಾಂತರ, ಟ್ರಾಮಾ ಕೇರ್ ಸೆಂಟರ್ ನಲ್ಲಿ 13ಕಿಲೋ ಲೀಟರ್ ಮತ್ತು ವಿಮ್ಸ್ ನಲ್ಲಿ 19ಕಿಲೋ ಲೀಟರ್ ಟ್ಯಾಂಕ್‍ಗಳನ್ನು ಅಳವಡಿಸಲಾಗಿದೆ.
ಇದುವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಆಕ್ಸಿಜನ್ ತೊಂದರೆಯಾಗದಂತೆ ಕಾರ್ನಿಯ ನಿರ್ವಹಿಸಲಾಗಿದ್ದು, ಮುಂದೆಯೂ ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ. ಎಲ್ಲ ನಮ್ಮ ಆಕ್ಸಿಜನ್ ಬೆಡ್‍ಗಳಲ್ಲಿ ಸಮರ್ಪಕವಾದ ಆಕ್ಸಿಜನ್ ಪ್ರಮಾಣ ಇದೆ ಎಂದು ಹೇಳಿದ್ದಾರೆ.