ಬಳ್ಳಾರಿ ಜಿಲ್ಲಾ ಸಹಕಾರ ಸಂಘ ಯೂನಿಯನ್ ಅಧ್ಯಕ್ಷರಾಗಿ ಶಿವಪ್ರಕಾಶ್ ಉಪಾಧ್ಯಕ್ಷರಾಗಿ ಕೆರಕೋಡಪ್ಪ ಆಯ್ಕೆ

ಬಳ್ಳಾರಿ, ಅ.30: ಜಿಲ್ಲೆಯ ಹೊಸಪೇಟೆಯಲ್ಲಿರುವ ನಿನ್ನೆ ಬಳ್ಳಾರಿ ಜಿಲ್ಲಾ ಸಹಕಾರ ಸಂಘ ಯೂನಿಯನ್‍ನ ನೂತನ ಅಧ್ಯಕ್ಷರಾಗಿ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವೃಷಬೇಂದ್ರಯ್ಯ ಅವರ ಪುತ್ರ ಜೆ.ಎಂ.ಶಿವಪ್ರಕಾಶ್ ಮತ್ತು ಉಪಾಧ್ಯಕ್ಷರಾಗಿ ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಬಿ.ಕೆ.ಕೆರಕೋಡಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯೂನಿಯನ್‍ಗೆ ಇವರು ಸೇರಿಂದತೆ ಬಿ.ಕೆ.ನಾಗರಾಜರಾವ್, ಕೆ.ಜಿ.ಗೌರಮ್ಮ, ಶ್ರೀಧರಮೂರ್ತಿ ಗೋಸಾವಿ, ಎಂ.ವೆಂಕಟೇಶ್ವರ ರೆಡ್ಡಿ, ಯು.ಆರ್.ನಾಗರಾಜ್, ಡಿ.ಹೆಚ್.ರಾಮಣ್ಣ, ಅಳವಂಡಿ ಕೊಟ್ರೇಶ್, ಹೆಚ್.ವೀರಶೇಖರ ಗೌಡ, ಜಿ.ಕುಮಾರಸ್ವಾಮಿ, ಪ್ರಿಯಾಂಕ್ ಜೈನ್ 12 ಜನರು ನಿರ್ದೇಶಕರು ಆಯ್ಕೆಯಾಗಿದ್ದರು. ಅವರಲ್ಲಿ ಇವರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ