ಬಳ್ಳಾರಿ ಜಿಲ್ಲಾ ಸಹಕಾರ ವ್ಯವಸಾಯ ಉತ್ಪನ್ನ ಮಾರಾಟ ಒಕ್ಕೂಟಕ್ಕೆ ನೀಲಕಂಠಪ್ಪ ನಾಮಪತ್ರ ಸಲ್ಲಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.28: ಹೊಸಪೇಟೆ ನಗರದಲ್ಲಿರುವ ಪುನಶ್ಚೇತನಗೊಂಡ ಬಳ್ಳಾರಿ ಜಿಲ್ಲಾ ಸಹಕಾರ ವ್ಯವಸಾಯ ಉತ್ಪನ್ನ ಮಾರಾಟ ಒಕ್ಕೂಟಕ್ಕೆ ಮಾ.12ರಂದು ನಡೆಯುವ ಸಂಪುಟ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಚುನಾವಣೆಗೆ ನಗರದ ಜನತಾ ಬಜಾರ್ ನ ಅಧ್ಯಕ್ಷ ಜಿ.ನೀಲಕಂಠಪ್ಪ ಇತರೇ ಸಹಕಾರ ಸಂಘಗಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಫೆ.26ರಿಂದ ಆರಂಭಗೊಂಡಿದ್ದು ಮಾ.4 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಮಾ.5 ನಾಮಪತ್ರ ಪರಿಶೀಲನೆ, ಮಾ.6 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯದಿನವಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ 7ಸ್ಥಾನಗಳಿದ್ದು 98 ಜನ ಮತದಾರರಿದ್ದಾರೆ.
ಮಾರಾಟ ಹಾಗೂ ಸಂಸ್ಕರಣ ಸಂಘಗಳ ಕ್ಷೇತ್ರಕ್ಕೆ 4ಸ್ಥಾನಗಳಿದ್ದು 6ಜನ ಮತದಾರರಿದ್ದಾರೆ. ಇತರೆ ಸಹಕಾರ ಸಂಘಗಳಿಂದ ಎರಡು ಸ್ಥಾನಗಳಿದ್ದು 11 ಜನ ಮತದಾರರಿದ್ದಾರೆ. ಈ ಕ್ಷೇತ್ರಕ್ಕೆ ನೀಲಕಂಠಪ್ಪ ಅವರು ಚುನಾವಣಾಧಿಕಾರಿ ನಾಯಕ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.

One attachment • Scanned by Gmail