ಬಳ್ಳಾರಿ ಜಿಲ್ಲಾ ವಿಭಜನೆ ವಿರೋಧಿ ಹೋರಾಟ 21 ನೇ ದಿನಕ್ಕೆ ಆಲ್ ಇಂಡಿಯಾ ರಾಹುಲ್ ಗಾಂಧಿ ಕಾಂಗ್ರೆಸ್ ಭಾಗಿ

ಬಳ್ಳಾರಿ ಜ 03 : ಜಿಲ್ಲಾ ವಿಭಜನೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ‌ ಮುಂದೆ ನಡೆಯುತ್ತಿರುವ ಹೋರಾಟ 21 ನೇ ದಿನಕ್ಕೆ ಕಾಲಿಟ್ಟಿದ್ದು ಇದರಲ್ಲಿ‌ಇಂದು
ಆಲ್ ಇಂಡಿಯಾ ರಾಹುಲ್ ಗಾಂಧಿ ಕಾಂಗ್ರೆಸ್ ಭಾಗಿಯಾಗಿತ್ತು.
ಆಲ್ ಇಂಡಿಯಾ ರಾಹುಲ್ ಗಾಂಧಿ ಕಾಂಗ್ರೆಸ್ನ ರಾಜ್ಯ ಅಧ್ಯಕ್ಷ ಎಂ ಜಿ ಅಖಿಲ್ ಅಹಮದ್, ಹೋರಾಟ ಸಮಿತಿಯ ಕೆ. ಎರ್ರಿಸ್ವಾಮಿ, ಟಿ. ಜಿ.ವಿಠಲ್,ಎಂ ನಾಗರಾಜ್ ,ಪುರುಷೋತ್ತಮಗೌಡ, ಶಫಿ,ಅಹಮದ್ ಬಿ. ಕಲೀಮ್, ನರಸಿಂಹಲು, ಮಹಮ್ಮದ್, ಇಸಾಕ್, ಮುಸ್ತಫಾ ಖಾನ್ ,ಅಬ್ಬಾಸ್, ಜಾಕಿರ್ ,ಹುಸೇನ್ ,ಶಕೀಲ್ ಅಹಮದ್ ಎಂ ಜಿ, ನರಸಿಂಹರಾಜ, ಮೊದಲಾದವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಹೋರಾಟಗಾರರು ಆನಂದ್ ಸಿಂಗ್ ಅವರು ತಮ್ಮ ವ್ಯಕ್ತಿಗತ ಹಾಗೂ ರಾಜಕೀಯ ಸ್ವಾರ್ಥ ಕ್ಕೋಸ್ಕರ ವಿಶಾಲವಾದ ಅಖಂಡ ಬಳ್ಳಾರಿ ಜಿಲ್ಲೆಯನ್ನು ಚೂರು ಚೂರು ಮಾಡಲು ಹೊರಟಿರುವುದು ನಾಚಿಕೆಗಿಡಿನ ಕೆಲಸ ಎಂದರು
ಆನಂದ್ ಸಿಂಗ್ ರವರು ತಮ್ಮ ರಾಜಕೀಯ, ಅಧಿಕಾರ ಬಲ, ಉಪಯೋಗಿಸಿ‌ ಇಂತಹ‌ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಜಿಲ್ಲೆಯನ್ನು ಓಡಿಯಲು ಹೊರಟಿರುವುದು ಅಕ್ಷಮ್ಯ ಅಪರಾಧವಾಗಿದೆ. ನಾವೆಲ್ಲರೂ ಇದನ್ನು ಖಂಡಿಸುತ್ತವೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಗೆ ನಾವೆಲ್ಲರೂ ಕೈಮುಗಿದು ಕೇಳಿಕೊಳ್ಳುತ್ತೇವೇ, ದಯವಿಟ್ಟು ತಾವು ಸ್ವಾರ್ಥ ರಾಜಕಾರಣಿಗಳ ಆಮಿಷಕ್ಕೆ ಹಾಗೂ ಒತ್ತಡಕ್ಕೆ ಮಣಿಯದೆ ನಮ್ಮಗೆ ನ್ಯಾಯ ಕೊಡಬೇಕೆಂದರು.