ಬಳ್ಳಾರಿ ಜಿಲ್ಲಾ ವಾಲ್ಮಿಕಿ ನಾಯಕರ ವಿದ್ಯಾಭಿವೃದ್ಧಿ ಸಂಘಕ್ಕೆ
 ಬಿ ರಾಂಪ್ರಸಾದ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.11: ಬಳ್ಳಾರಿ ಜಿಲ್ಲಾ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘಕ್ಕೆ ಬಿ ರಾಂಪ್ರಸಾದ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾ.9ರಂದು ನಗರದ ಮೋಕಾ ರಸ್ತೆಯಲ್ಲಿರುವ ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಮೂವತ್ತು ಜನ ನಿರ್ದೇಶಕರು ಮತದಾನ ಮಾಡುವ ಮೂಲಕ ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು, ಒಬ್ಬ ಕಾರ್ಯದರ್ಶಿ, ಒಬ್ಬ ಸಹಕಾರ್ಯದರ್ಶಿ ಮತ್ತು ಒಬ್ಬ ಕೋಶಾಧ್ಯಕ್ಷರು ಸೇರಿದಂತೆ ಒಟ್ಟು ಆರು ಜನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. 
ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ ರಾಂಪ್ರಸಾದ್ ಮತ್ತು ಜಿ ರುದ್ರಪ್ಪ ಸ್ಪರ್ಧಿಸಿದ್ದರು. ಬಿ ರಾಂಪ್ರಸಾದ್ 21 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಜಿ ರುದ್ರಪ್ಪನವರು 08 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು. ಒಂದು ಮತ ಅಸಿಂಧುವಾಯಿತು.
ತಲಾ 22 ಮತಗಳನ್ನು ಪಡೆದ ಬಿ ಜಯರಾಮ್ ಮತ್ತು ಬಿ.ಆರ್.ಎಲ್ ಶ್ರೀನಿವಾಸ್ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ದಿಗಳಾದ ಗೋವಿಂದಪ್ಪ ಮತ್ತು ವಿಠೋಭ 08 ಮತಗಳನ್ನು ಪಡೆದು ಪರಾಭವಗೊಂಡರು. 22 ಮತಗಳನ್ನು ಪಡೆಯುವ ಮೂಲಕ ಪರುಶುರಾಮುಡು ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಗಂಗಪ್ಪನವರು 08 ಮತಗಳನ್ನು ಪಡೆದು ಪರಾಭವಗೊಂಡರು, 20 ಮತಗಳನ್ನು ಪಡೆದ ಎಚ್ ವಿಜಯಕುಮಾರ್ ತೆಕ್ಕಲಕೋಟೆ, ಸಹಕಾರ್ಯದರ್ಶಿಯಾಗಿ ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಬಾಲರಾಜ್ 08 ಮತಗಳನ್ನು ಪಡೆದು ಸೋಲೊಪ್ಪಿದರು. 21 ಮತಗಳನ್ನು ಪಡೆಯುವ ಮೂಲಕ ಬಿ ಗೌರಯ್ಯ ಕೋಶಾಧ್ಯಕ್ಷರಾಗಿ ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಅಂಜಿನಪ್ಪ 08 ಮತಗಳನ್ನು ಪಡೆಯುವ ಮೂಲಕ ಪರಭಾವಗೊಂಡರೆಂದು ಕಾರ್ಯದರ್ಶಿ ಬಿ  ತಿಳಿಸಿದ್ದಾರೆ.