ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ

ಬಳ್ಳಾರಿ ನ 01 : ನಗರದ ಕೆ.ಸಿ.ರಸ್ತೆಯಲ್ಲಿರುವ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ 65ನೇ ಕನ್ನಡ ರಾಜ್ಯೋತ್ಸವದ ದಿನಾಚರಣೆಯನ್ನು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಹೂ ಮಾಲೆಯನ್ನು ಹಾಕಿ ಪೂಜೆ ಸಲ್ಲಿಸಿ ನಾಡ ಧ್ವಜಾರೋಹಣದೊಂದಿಗೆ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ವಿ. ರವಿಕುಮಾರ್, ಗೌರವ ಕಾರ್ಯದರ್ಶಿ ಕೆ. ಸಿ. ಸುರೇಶ್ ಬಾಬು, ಜಂಟಿ ಕಾರ್ಯದರ್ಶಿಗಳಾದ ಎಸ್. ದೊಡ್ಡನಗೌಡ್, ಸೊಂತ ಗಿರಿಧರ್, ಸ ಹಾಸಮಿತಿ ಅಧ್ಯಕ್ಷ ಎ. ಮಂಜುನಾಥ್, ಟಿ.ಶ್ರೀನಿವಾಸ ರಾವ್,ವಿ.ರಾಮಚಂದ್ರ, ಮಲ್ಲಿಕಾರ್ಜುನ ಮಸ್ಕಿ, ವಿವಿಧ ಕಮಿಟಿಗಳ ಚೇರ್‍ಮನ್‍ಗಳು, ವಿಶೇಷ ಆಹ್ವಾನಿತರು, ಮತ್ತು ವಿಶೇಷ ಸಮನ್ವಯ ಸಮಿತಿ ಸದಸ್ಯರು ಪಾಲ್ಗೊಂಡು ಗೌರವ ಸಲ್ಲಿಸಿದರು.