ಬಳ್ಳಾರಿ ಜಿಲ್ಲಾ ಪಂಚಾಯ್ತಿಗೆ 28 ಕ್ಷೇತ್ರಗಳು ನಿಗಧಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.08: ಇಲ್ಲಿನ ಜಿಲ್ಲಾ ಪಂಚಾಯ್ತಿಗೆ ಚುನಾವಣೆ ನಡೆಸಲು ಕರ್ನಾಟಕ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗಧಿ ಮತ್ತು ಕ್ಷೇತ್ರಗಳ ಸೀಮಾಗಡಿ ರಚಿಸಿ ಸೀಮಾನಿರ್ಣಯ ಆಯೋಗ ಆದೇಶ ಹೊರಡಿಸಿದೆ.
ಈ ಆದೇಶದಂತೆ ಜಿಲ್ಲೆಯ ಐದು ತಾಲೂಕುಗಳಲ್ಲಿ 28 ಜಿ.ಪಂ. ಕ್ಷೇತ್ರಗಳನ್ನು ಗುರುತಿಸಿದೆ. ಅದರಂತೆ ಬಳ್ಳಾರಿ ತಾಲೂಕಿನಲ್ಲಿ ಕೊರ್ಲಗುಂದಿ, ಶ್ರೀಧರಗಡ್ಡೆ, ಕೊಳಗಲ್ಲು, ಮೋಕಾ, ಸಿಂಧವಾಳ, ಸಂಗನಕಲ್ಲು, ರೂಪನಗುಡಿ, ಹಲಕುಂದಿ ಕ್ಷೇತ್ರಗಳನ್ನು, ಸಿರುಗುಪ್ಪ ತಾಲೂಕು ಹಚ್ಚೊಳ್ಳಿ, ಅಗಸನೂರು, ರಾರಾವಿ, ಹಳೇಕೋಟೆ, ಕರೂರು, ಸಿರಿಗೇರಿ, ತಾಳೂರು ಕ್ಷೇತ್ರಗಳನ್ನು, ಕುರುಗೋಡು ತಾಲೂಕಿನಲ್ಲಿ ಗೆಣಿಕೆಹಾಳ್, ಬಾದನಹಟ್ಟಿ, ಕೋಳೂರು, ಸಂಡೂರು ತಾಲೂಕಿನಲ್ಲಿ ಯಶವಂತನಗರ, ಚೋರನೂರು, ಕೃಷ್ಣನಗರ, ದೇವಗಿರಿ, ತೋರಣಗಲ್ಲು, ವಡ್ಡು, ಅಂತಾಪುರ, ಮತ್ತು ಕಂಪ್ಲಿ ತಾಲೂಕಿನಲ್ಲಿ ಎಮ್ಮಿಗನೂರು, ದೇವಸಮುದ್ರ, ಮೆಟ್ರಿ ಕ್ಷೇತ್ರಗಳನ್ನು ರಚಿಸಲಾಗಿದೆ.