ಬಳ್ಳಾರಿ ಜಿಲ್ಲಾ ಕುರುಬ ಸಂಘದಿಂದ ಸರ್ಕಾರಿ ನಿವೇಶನ ಒತ್ತುವರಿ: ಪಾಲಿಕೆ ನೋಟೀಸ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.10: ಜಿಲ್ಲಾ ಕುರುಬರ ಸಂಘದಿಂದ ಪಾಲಿಕೆಗೆ ಸಂಬಂಧಿಸಿದ ನಿವೇಶನ ಒತ್ತವರಿ ಮಾಡಿರುವ ಬಗ್ಗೆ ವಿವರಣೆ ಕೇಳಿ ಸಂಘದ ಅಧ್ಯಕ್ಷರಿಗೆ ಪಾಲಿಕೆ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ.
ನೋಟೀಸ್ ನಲ್ಲಿ ನಗರದ ವಾರ್ಡ್ ನಂ:37. ದೇವಿ ನಗರ  ಪ್ರದೇಶದ ಟಿ.ಎಸ್.ನಂ 370, ಸರ್ಕಾರಿ ಜಾಗದಲ್ಲಿ ನೀವು ವಾಣಿಜ್ಯ  ಸಂಕೀರ್ಣ ನಿರ್ಮಿಸಲು ಪಿಲ್ಲರ್‌ಗಳನ್ನು ಹಾಕುತ್ತಿದ್ದು ಹಾಗೂ ತಮ್ಮ ಜಾಗದಲ್ಲಿ ಕಟ್ಟಿರುವ ಕಲ್ಯಾಣ ಮಂಟಪದ  ಮುಖ್ಯ ದ್ವಾರವನ್ನು ದೇವಿನಗರ ಮುಖ್ಯ ರಸ್ತೆಯ (ಹಳೆ ಧಾರವಾಡ ರಸ್ತೆ), ಕಡೆಗೆ ಇಟ್ಟಿರುವುದು ಸಮಾರಂಭಗಳು ನಡೆಯುವಾಗ ಪಟಾಕಿ ಸಿಡಿಸುವುದು ಹಾಗೂ ವಾಹನಗಳ ಪಾರ್ಕಿಂಗ್ ಮಾಡುವುದು  ಅಲ್ಲಿರುವ ಸ್ಲಮ್ ನಿವಾಸಿಗಳಿಗೆ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿರುವುದಾಗಿ ದೂರು ಬಂದಿದೆ.
ಆದುದರಿಂದ ಈ ನೋಟೀಸ್ ತಲುಪಿದ ತಕ್ಷಣ ನಿರ್ಮಾಣ ಕಾಮಗಾರಿಯನ್ನ ಸ್ಥಗಿತಗೊಳಿಸಿ. ನೋಟೀಸ್ ತಲುಪಿದ ನಂತರದ 7 ದಿನಗಳಲ್ಲಿ ನಿಮ್ಮ ಕಟ್ಟಡಕ್ಕೆ ಸಂಬಂದಿಸಿದ ಮಾಲಿಕತ್ವದ ದಾಖಲೆಗಳು, ಸರ್ವೆ ದಾಖಲೆ, ಖಾತೆ ಪಾವತಿ ರಸೀದಿ ಮತ್ತು ಕಟ್ಟಡ ಪರವಾನಿಗೆ ಆದೇಶ ಮತ್ತು ನಕ್ಷೆಗಳನ್ನು ನಮ್ಮ ಕಛೇರಿಗೆ ಸಲ್ಲಿಸಬೇಕು‌  ತಪ್ಪಿದ್ದಲ್ಲಿ ಕರ್ನಾಟಕ ಪೌರ ನಿಗಮಗಳ ಕಾಯ್ದೆ-1976 ನಿಯಮ-287, 288, 321 ಪ್ರಕಾರ, ನಿಮ್ಮ  ಅನಧಿಕೃತ ಕಟ್ಟಡವನ್ನು ಈ ಕಛೇರಿಯಿಂದ ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಆಯುಕ್ತರ ಸಹಿ ಮೂಲಕ ಜ.8 ರಂದು ಜಾರಿ ಮಾಡಿದೆ.
ಈ ಬಗ್ಗೆ ವಿವರಣೆಗೆ ಕರೆ ಮಾಡಿದರೆ ಸಂಘದ ಅಧ್ಯಕ್ಷರ ಪೋನ್ ಸ್ವಿಚ್ ಆಫ್ ಇತ್ತು.
ಜಾಗ ಸಂಘದ್ದೇ ಒತ್ತುವರಿ ಇಲ್ಲ:
ನಾವು ನಮ್ಮಸಂಘದ ಜಾಗದಲ್ಲೇ ಕಟ್ಟಡ ಕಟ್ಟಿದ್ದೇವೆ. ಕಟ್ಟುತ್ತಿದ್ದೇವೆ‌. ಪಾಲಿಕೆ ನಿವೇಶನ ಇತ್ತುವರಿ ಮಾಡಿಲ್ಲ. ಕೆಲವರು ವಿನಾ ಕಾರಣ ದೂರು ನೀಡಿರುವುದರಿಂದ. ಪಾಲಿಕೆ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ‌. ಅದಕ್ಕೆ ನಮ್ಮ ಬಳಿ ಇರುವ ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಲಿದೆ. ಸಚಿವರ ಆಪ್ತರೊಬ್ವರ ಚಿತಾವಣಿಯಿಂದ ಒತ್ತಡಕ್ಕೆ ಮಣಿದು ಪಾಲಿಕೆ ಆಯುಕ್ತರು ನೋಟೀಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿ ಇದೆ.
ಈಗಾಗಲೇ ಸಂಘದ ಆವರಣದ ಬಳಿ ಕಳೆದ ಒಂದು ವಾರದಿಂದ ಈ ಬಗ್ಗೆ ವಾದ ವಿವಾದ, ಚರ್ಚೆ, ಸಮಾಲೋಚನೆ, ಪರಸ್ಪರ ಒಡಂಬಡಿಕೆ ನಡೆದಿವೆ. ಆದರೂ ಪಾಲಿಕೆ ಆಯುಕ್ತರು ನೀಡಿರುವ ನೋಟಿಸ್ ನಿಂದ  ಈಗ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಅಲ್ಲಿಪುರ ಕೆ.ಮೋಹನ್
ಖಜಾಂಚಿ, ಜಿಲ್ಲಾ ಕುರುಬರ ಸಂಘ ಬಳ್ಳಾರಿ.