ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾಗಿ ರಾಮಕೃಷ್ಣ ಅವಿರೋಧ ಆಯ್ಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.15: ಜಿಲ್ಲಾ ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಕೆ.ರಾಮಕೃಷ್ಣ ಅವರು ಇಂದು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಎರ್ರೆಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಸಂಘದ ಕಚೇರಿಯಲ್ಲಿಉಪಾಧ್ಯಕ್ಷ ಕೆ.ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ ನಡೆದ ನಿರ್ದೇಶಕರ  ಸಭೆಯಲ್ಲಿ ರಾಮಕೃಷ್ಣ ಅವರನ್ನು ಆಯ್ಕೆ ಮಾಡಲಾಯ್ತು.
ಇವರು ಈ ಹಿಂದೆ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಎ.ಮಲ್ಲೇಶಿ, ಖಜಾಂಚಿ ಅಲ್ಲಿಪುರ ಕೆ.ಮೋಹನ್, ಮುಖಂಡರುಗಳಾದ ದಮ್ಮೂರು ಸೋಮಪ್ಪ,ಬಿ.ಕೆ.ಕೆರೆಕೋಡಪ್ಪ, ಡಾ.ಪಿ.ಎಲ್.ಗಾದಿಲಿಂಗನಗೌಡ, ಸಿಂದವಾಳ ಸಿದ್ದನಗೌಡ, ಕೆ.ಎ.ರಾಮಲಿಂಗಪ್ಪ, ಬಿಸಲಹಳ್ಳಿ ತಿಪ್ಪೇರುದ್ರಪ್ಪ, ಕೊಳಗಲ್ಲು ಮಲ್ಲಿಕಾರ್ಜುನ ಮೊದಲಾದವರು ಇದ್ದರು.