ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ದಂಡಿನ ತಿಪ್ಪೇಸ್ವಾಮಿ ಆಯ್ಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.05: ಇಲ್ಲಿನ ಬಳ್ಳಾರಿ‌ ಡ್ರಸ್ಟ್ರಿಕ್ ಕಾಟನ್ ಅಸೋಸಿಯೇಷನ್ ಗೆ 2022-23 ಮತ್ತು 2023-24 ನೇ ಸಾಲಿಗೆ  ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ಅಧ್ಯಕ್ಷರಾಗಿ ದಂಡಿನ ತಿಪ್ಪೇಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಿನ್ನೆ ಮಧ್ಯಾಹ್ನ ಅಸೋಸಿಯೇಷನ್ ನ ಹಿಂದಿನ ಅಧ್ಯಕ್ಷ ಸಂಗನಕಲ್ಲು ದೊಡ್ಡನಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ನೂತನ ಪದಾಧಿಕಾರಿಗಳನ್ನು  ನೇಮಕ   ಮಾಡಲಾಯಿತು.
ಅಸೋಸಿಯೇಷನ್ ಗೌರವ ಅಧ್ಯಕ್ಷರಾಗಿ‌ ಈ ಹಿಂದೆ ಅಧ್ಯಕ್ಷರಾಗಿದ್ದ ವಿ.ರವಿಕುಮಾರ್, ಬಿ.ಮೌಲಾಲಿ ಮತ್ತು ಎಸ್.ದೊಡ್ಡನಗೌಡ ಅವರು.
ಉಪಾಧ್ಯಕ್ಷರಾಗಿ ನಂದೀಶ್ ಬಾಬು, ಕೆ.ಸಿ.ಸುರೇಶ್ ಬಾಬು, ಕಾರ್ಯದರ್ಶಿಯಾಗಿ ಟಿ.ಚೆನ್ನಪ್ಪ, ಜಿಂಟಿ ಕಸರ್ಯದರ್ಶಿಗಳಾಗಿ ಪಿ.ದೊಡ್ಡಬಸವನಗೌ, ಕೃಷ್ಣಕಾಂತ್, ರಾಮಚಂದ್ರಪ್ಪ, ಕಚಾಂಚಿಯಾಗಿ ಬಿ.ಎ.ರವಿಕುಮಾರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಹಾಬಲೇಶ್ವರಪ್ಪ, ವೆಂಕಟೇಶ್ ವಿ, ಬಾಲಕೃಷ್ಣ, ಮಾರೆಣ್ಣ, ಟಿ.ಸುರೇಶ್, ಜೆ.ಅನಿಲ್ ಕುಮಾರ್, ಕೆ.ಜೆ.ರಘು, ಮಹಾರುದ್ರಗೌಡ, ವಾಸು, ರಾಜೇಗೌಡ, ಸಾಗರ್, ಜಿ.ರಾಘವೇಂದ್ರ, ಮನಿಷ್, ಶರತ್, ಅರುಣ್ ಕುಮಾರ್, ಮಂಜುನಾಥ, ಆರ್.ನಾಗರಾಜ್ ಅವರನ್ನು ಆಯ್ಕೆಮಾಡಲಾಗಿದೆ.
ನೂತನವಾಗಿ ಅಧ್ಯಕ್ಷರಾಗಿ ಅಯ್ಕೆಯಾಗಿರುವ ದಂಡಿನ ತಿಪ್ಪೇಸ್ವಾಮಿ ಅವರು ಸಂಜೆವಾಣಿಯೊಂದಿಗೆ ಮಾತನಾಡಿ. ಬರುವ ಎರೆಡು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಹತ್ತಿ ಮಿಲ್ ಗಳ ಮಾಲೀಕರು ಎದಿರಿಸುತ್ತಿರುವ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಿದೆ. ಅಲ್ಲದೆ ಹತ್ತಿ ಬೆಳೆಯುವ ರೈತರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಲು ಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದರು.